ನಾಯಿಯನ್ನು ತಪ್ಪಿಸಲು ಹೋದ ಕಾರು ಡಿವೈಡರ್ ಗೆ ಡಿಕ್ಕಿ: ಇಬ್ಬರು ಮಹಿಳೆಯರು ಸಾವು

Prasthutha|

ಚಿತ್ರದುರ್ಗ: ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದು ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿ ಓರ್ವನಿಗೆ ಗಂಭೀರ ಗಾಯಗೊಂಡ ದಾರುಣ ಘಟನೆ ಚಿಕ್ಕಬೆನ್ನೂರು ಸಮೀಪ ನಡೆದಿದೆ.

- Advertisement -

ಮಹಾರಾಷ್ಟ್ರ ಮೂಲದ ಮಾನ್ಸಿ (40) ಹಾಗೂ ಉಜ್ವಲ್ ಬಾರ್ವಿ (44) ಮೃತಪಟ್ಟವರು. ಗಾಯಗೊಂಡ ಸಚ್ಚಿನ್ ಬಾರ್ವಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ.

ತಿರುಪತಿ ದರ್ಶನ ಮುಗಿಸಿ ವಾಪಸ್ ಮಹಾರಾಷ್ಟ್ರಕ್ಕೆ ತೆರಳುವಾಗ ಮಾರ್ಗ ಮಧ್ಯದ ಚಿಕ್ಕಬೆನ್ನೂರು ಸಮೀಪ ಕಾರಿಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಭರಮಸಾಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Join Whatsapp