ಉಕ್ರೇನ್’ನಿಂದ ಸುರಕ್ಷಿತವಾಗಿ ಕೊಡಗಿಗೆ ಆಗಮಿಸಿದ ಇಬ್ಬರು ವಿದ್ಯಾರ್ಥಿಗಳು

Prasthutha|

ಮಡಿಕೇರಿ: ಉಕ್ರೇನ್ ನಲ್ಲಿ ಶಿಕ್ಷಣ ಪಡೆಯುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಸುರಕ್ಷಿತವಾಗಿ ಕೊಡಗಿಗೆ ಆಗಮಿಸಿದ್ದಾರೆ.

- Advertisement -

ಕುಶಾಲನಗರದ ಲಿಖಿತ್ ಮತ್ತು ಚಂದನ್ ಗೌಡ ವಿಶೇಷ ವಿಮಾದ ಮೂಲಕ ದೆಹಲಿಗೆ ಬಂದು ನಂತರ ಕುಶಾಲನಗರ ತಲುಪಿದ್ದಾರೆ. ಇನ್ನೂ ವಿದ್ಯಾರ್ಥಿಗಳು ಬರುತ್ತಿದ್ದಂತೆ ಪೋಷರು ಸೇರಿದಂತೆ ಹಲವು ಮಂದಿ ಸೇರಿ ಸಿಹಿ ಹಂಚಿ ವಿದ್ಯಾರ್ಥಿಗಳನ್ನು ಅದ್ಧೂರಿಯಾಗಿ ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿಮಾತನಾಡಿದ ವಿದ್ಯಾರ್ಥಿಗಳು, ನಾವು ಬಹಳ ಕಷ್ಟದಲ್ಲಿ ಗಡಿಯನ್ನು ತಲುಪಿದ್ದೇವೆ. ನಮಗೆ ಯಾರ ಸಹಕಾರ ಇಲ್ಲದೆ ನಾವು ನಮ್ಮ ಸ್ವಂತ ರಿಸ್ಕ್ ನಲ್ಲಿ ಬಂದಿದ್ದೇವೆ. ಸುಮಾರು 16 ಕಿ.ಮೀ ಊಟ ತಿಂಡಿ ಇಲ್ಲದೆ ಟ್ರಾವಲ್ ಮಾಡಿದ್ದೇವೆ ಎಂದು ಹೇಳಿದರು.

Join Whatsapp