ತಮಿಳುನಾಡಿಗೆ ಸೇರಿದ ಒಂದೇ ನಂಬರ್​​ನ ಎರಡು ಖಾಸಗಿ ಬಸ್​ ಜಪ್ತಿ

Prasthutha|

ಕೋಲಾರ: ಒಂದೇ ರಿಜಿಸ್ಟ್ರೇಷನ್​ ನಂಬರ್​​ನ ಎರಡು ಖಾಸಗಿ ಬಸ್​ಗಳನ್ನು ಆರ್​​ಟಿಒ ಅಧಿಕಾರಿಗಳು ಜಪ್ತಿ ಮಾಡಿದ ಘಟನೆ ಕೆಜಿಎಫ್​ನಲ್ಲಿ ನಡೆದಿದೆ. ​

- Advertisement -

ತಮಿಳುನಾಡಿನ ರಮೇಶ್ ಟೂರ್ಸ್ ಅಂಡ್ ಟ್ರಾವೆಲ್ಸ್​ಗೆ ಸೇರಿದ ಈ 2 ಬಸ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದೇ ರಿಜಿಸ್ಟ್ರೇಷನ್​ ನಂಬರ್ ಅನ್ನು ಎರಡು ಬಸ್​ಗಳಿಗೆ ಹಾಕಿಕೊಂಡು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿರುವ ಪ್ರಕರಣ ಇದಾಗಿದೆ. ಬೆಮೆಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕೋಲಾರ ಜಿಲ್ಲೆಯ ಕೆಜಿಎಫ್ ಗೆ ಸೇರಿದ ರಸ್ತೆ ಸಾರಿಗೆ ಸಂಸ್ಥೆಯ (ಆರ್.ಟಿ.ಓ) ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ಬಸ್​​ಗಳ ರಿಜಿಸ್ಟ್ರೇಷನ್​ ನಂಬರ್ ತಮಿಳುನಾಡಿಗೆ ಸೇರಿದ್ದಾಗಿವೆ.



Join Whatsapp