ಬೈಕ್’ನಲ್ಲಿ ಬಂದ ದುಷ್ಕರ್ಮಿಗಳಿಂದ ಇಬ್ಬರು ಕುಖ್ಯಾತ ರೌಡಿಗಳ ಮೇಲೆ ದಾಳಿ

Prasthutha|

ಬೆಂಗಳೂರು: ಚಾಮರಾಜಪೇಟೆಯ ಧೋಬಿ ಘಾಟ್ ಬಳಿ ನಡು ರಸ್ತೆಯಲ್ಲಿ ಇಬ್ಬರು ಕುಖ್ಯಾತ ರೌಡಿಗಳ ಮೇಲೆ ದಾಳಿ ನಡೆದಿದೆ.

- Advertisement -


ಎರಡು ದಿನದ ಹಿಂದೆ ಚಾಮರಾಜಪೇಟೆಯ ಧೋಬಿ ಘಾಟ್ ಬಳಿ ಕೆಜಿ ನಗರ ಠಾಣೆಯ ರೌಡಿಶೀಟರ್ ಲೊಡ್ಡೆ ಪ್ರವೀಣ್ ಹಾಗೂ ಸ್ವಾಮಿ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿದ್ದಾರೆ.


ಹಣಕಾಸು ವಿಚಾರಕ್ಕೆ ದಾಳಿ ನಡೆದಿದ್ದು ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -


ಮೂರು ಮಂದಿ ಆರೋಪಿಗಳು ದಾಳಿ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಕೆಂಪೇಗೌಡ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


ಈ ಬಗ್ಗೆ ಮಾತನಾಡಿರುವ ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಅವರು , ರೌಡಿಶೀಟರ್ ಪ್ರವೀಣ್ ಹಾಗೂ ಸ್ವಾಮಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. 307 ಸೇರಿ ಹಲವು ಪ್ರಕರಣಗಳು ಪ್ರವೀಣ್ ಮೇಲಿದ್ದು, ಹಲ್ಲೆ ನಡೆಸಿದ ಆರೋಪಿಗಳನ್ನ ಪತ್ತೆ ಹಚ್ಚುವ ಕಾರ್ಯದಲ್ಲಿದ್ದೇವೆ. ಒಟ್ಟು 9 ಮಂದಿ ಬೈಕ್’ನಲ್ಲಿ ಬಂದು ಹಲ್ಲೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಸಿಸಿಟಿವಿ ಆಧರಿಸಿ ಆರೋಪಿಗಳ ಹುಡುಕಾಟ ಮುಂದುವರೆಸಿದ್ದೇವೆ ಎಂದು ಹೇಳಿದ್ದಾರೆ.

Join Whatsapp