ಸಿದ್ದರಾಮಯ್ಯ ಕಾರಿನ ಮೇಲೆ ದಾಳಿ ಮಾಡಲು ಬಂದ ಇಬ್ಬರ ಬಳಿ ಕತ್ತಿ ಇತ್ತು: ಲಕ್ಷ್ಮಣ್ ಸ್ಫೋಟಕ ಹೇಳಿಕೆ

Prasthutha|

ಮಡಿಕೇರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ದಾಳಿ ಮಾಡಲು ಬಂದವರಲ್ಲಿ ಇಬ್ಬರ ಬಳಿ ಕತ್ತಿ ಇತ್ತು ಎಂದು ಕೆಪಿಸಿಸಿ ವಕ್ತಾರ, ಕೊಡಗು ಉಸ್ತುವಾರಿ ಲಕ್ಷ್ಮಣ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

- Advertisement -

ಪೊಲೀಸ್ ವೈಫಲ್ಯವನ್ನು ಖಂಡಿಸಿ ಮಡಿಕೇರಿ ಎಸ್.ಪಿ ಕಚೇರಿ ಮುಂದೆ ಕೊಡಗು ಕಾಂಗ್ರೆಸ್ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದ ಲಕ್ಷ್ಮಣ್ ಅವರು, ಸಿದ್ದರಾಮಯ್ಯ ಕಾರಿನ ಮೇಲೆ ದಾಳಿ ಮಾಡಲು ಬಂದವರಲ್ಲಿ ಇಬ್ಬರ ಕೈಯಲ್ಲಿ ಕತ್ತಿ ಇತ್ತು, ನಾನು ಕಾರಿನೊಳಗೆ ಇದ್ದೆ.

ಇಬ್ಬರು ಕತ್ತಿ ತಕೊಂಡು ಹೊಡೆಯಲಿಕೆ ಬಂದರು, ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಚುಚ್ಚಿ ಬಿಡುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ ಅವರು, ಇದರ ಬಗ್ಗೆ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಗೂಂಡಾ ಕಾಯ್ದೆಯಡಿ ಬಂಧಿಸಬೇಕೆಂದು ಒತ್ತಾಯಿಸಿದರು.

- Advertisement -

26 ರಂದು ಮಡಿಕೇರಿ ಎಸ್.ಪಿ ಕಚೇರಿ ಮುತ್ತಿಗೆ ಹೋರಾಟ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ನಡೆಯಲಿದ್ದು, ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ 70 ಕ್ಕೂ ಹೆಚ್ಚು ಶಾಸಕರು ಹೋರಾಟದಲ್ಲಿ ಭಾಗವಹಿಸಲಿದೆ ಎಂದರು.

ಈ ಘಟನೆಯಿಂದಾಗಿ ಬಿಜೆಪಿಗರು ರಾಷ್ಟ್ರಮಟ್ಟದಲ್ಲಿ ಕೊಡಗಿನ ಹೆಸರನ್ನು ಕೆಡಿಸಿದ್ದಾರೆಂದು ದೂರಿದರು.

Join Whatsapp