ಭಾರೀ ಮಳೆಗೆ ಕಟ್ಟಡ ಕುಸಿತ: ಇಬ್ಬರು ಕಾರ್ಮಿಕರು ಮೃತ್ಯು

Prasthutha|

ಬೆಂಗಳೂರು: ನಗರದಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಕಟ್ಟಡವೊಂದು ಕುಸಿದು ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ವೈಟ್ ಫೀಲ್ಡ್ ಬಳಿಯ ಹೂಡಿಯಲ್ಲಿ ನಡೆದಿದೆ.

- Advertisement -

ಬಿಹಾರ ಮೂಲದ ಕೂಲಿ ಕಾರ್ಮಿಕರಾದ ಝೈನುದ್ದೀನ್, ಹರ್ಮಾನ್  ಮೃತಪಟ್ಟಿದ್ದು, ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ಓರ್ವ ನ ಸ್ಥಿತಿ ಗಂಭೀರವಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಮೂವರನ್ನು ಕಟ್ಟಡದಿಂದ ಹೊರ ತೆಗೆದಿದ್ದಾರೆ. ಬಿಎಲ್ ಆರ್ ಕಂಪನಿಗೆ ಸೇರಿದ ಕಟ್ಟಡ ತೆರವು ಮಾಡಲಾಗುತ್ತಿತ್ತು.

- Advertisement -

ನಿನ್ನೆ ರಾತ್ರಿ ಮಳೆ ಬಂದ ಹಿನ್ನೆಲೆಯಲ್ಲಿ ಕಟ್ಟಡದ ಕೆಳಗಿನ ರೂಮ್ ನಲ್ಲಿ ಕಾರ್ಮಿಕರು ಮಲಗಿದ್ದರು. ರಾತ್ರಿ ಮಳೆಗೆ ಬಿಲ್ಡಿಂಗ್ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಈ ವೇಳೆ ಕೆಳಗೆ ರೂಮ್ನಲ್ಲಿ ಮಲಗಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.ಈ ಕುರಿತು ಮಹಾದೇವಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.



Join Whatsapp