ಪಶ್ಚಿಮ ಬಂಗಾಳ: ತನ್ನ ಮರಿಯ ಸಾವಿನಿಂದ ನೊಂದು ಕೆರಳಿದ ಆನೆಯೊಂದು ಇಬ್ಬರು ವೃದ್ಧರನ್ನು ಕೊಂದಿದೆ. ಈ ಘಟನೆ ಪಶ್ಚಿಮ ಬಂಗಾಳದ ಜಾರ್‌ಗ್ರಾಮ್ ಗ್ರಾಮದಲ್ಲಿ ನಡೆದಿದೆ. ಆನಂದ್ ಹಾಗೂ ಶಶಧರ್ ಮಹಾತಾ ಮೃತರು.
ಜನರು ಮರಿ ಆನೆ ಮರಿಯ ಶವ ನೋಡಲು ಬಂದಿದ್ದ ವೇಳೆ ಆನೆ ದಾಳಿ ನಡೆಸಿದೆ. ಈ ವೇಳೆ ಜನರು ಓಡಿ ಹೋಗಿದ್ದಾರೆ. ಆದರೆ ಇಬ್ಬರು ವೃದ್ಧರಿಗೆ ಆನೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ದಾರಣವಾಗಿ ಮೃತಪಟ್ಟಿದ್ದಾರೆ. ಅಲ್ಲದೆ, ಕೋಪಗೊಂಡ ಆನೆ ರಾಮೇಶ್ವರ ದೇವಸ್ಥಾನದ ಬಳಿ ಇರುವ ಚಾಂದಬಿಲಾ ಬಳಿ ನಿಂತಿದ್ದ ಬಸ್ ಹಾಗೂ ಬೈಕ್ ಅನ್ನು ಬೀಳಿಸಿ ಸಿಟ್ಟು ತೋರಿಸಿಕೊಂಡಿದೆ.
ಆನೆಯ ದಾಳಿಯಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲು 40 ಮಂದಿ ಅರಣ್ಯ ಸಿಬ್ಬಂದಿ ತಂಡವನ್ನು ನಿಯೋಜಿಸಲಾಗಿದ್ದು, ಅವರು ಸೂಕ್ತವ್ಯವಸ್ಥೆ ಮಾಡಿದ್ದಾರೆ ಎಂದು ಡಿಎಫ್ಒ ಶಿವಾನಂದ ರಾವ್ ಹೇಳಿದ್ದಾರೆ.