ಆನೆ ದಾಳಿಗೆ ಇಬ್ಬರು ಸಾವು

Prasthutha|

ಕೋಲಾರ: ಆನೆ ದಾಳಿಗೆ ಇಬ್ಬರು ಮೃತಪಟ್ಟಿರುವ ಘಟನೆ ಕೋಲಾರ ಗಡಿ ಭಾಗದಲ್ಲಿ ಶುಕ್ರವಾರ ನಡೆದಿದೆ.

- Advertisement -


ಚಿತ್ತೂರಿನ ಪತಿಚೇನು ಗ್ರಾಮದ ಓರ್ವ ಮಹಿಳೆ ಹಾಗೂ ಸಪ್ಪನಿಕುಂಟಾ ಗ್ರಾಮದ ವ್ಯಕ್ತಿಯ ಮೇಲೆ ಆನೆ ದಾಳಿ ನಡೆಸಿದೆ. ದಾಳಿಗೆ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು ಘಟನೆಯಿಂದ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ



Join Whatsapp