ಲಾರಿಯಿಂದ ಕಬ್ಬಿಣದ ಶೀಟ್ ಬಿದ್ದು ಇಬ್ಬರು ಸಾವು

Prasthutha|

ತ್ರಿಶೂರ್: ಚಲಿಸುತ್ತಿದ್ದ ಟ್ರೈಲರ್ ಲಾರಿಯಿಂದ ಕಬ್ಬಿಣದ ಶೀಟ್ ಗಳು ಬಿದ್ದು ಇಬ್ಬರು ಪಾದಚಾರಿಗಳು ಮೃತಪಟ್ಟಿರುವ ಘಟನೆ ಕೇರಳದ ತ್ರಿಶೂರ್ ನ ಪುನ್ನಾಯುರ್ಕುಲಂ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

- Advertisement -

ಮೃತರನ್ನು ಮಹಮ್ಮದಲಿ (75) ಮತ್ತು ಶಾಜಿ ಎಂದು ಗುರುತಿಸಲಾಗಿದೆ.

ಮೃತರಲ್ಲಿ ಒಬ್ಬರು ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಮಯದಲ್ಲಿ, ಹಾಗೂ ಇನ್ನೊಬ್ಬರು ಸ್ಕೂಟರ್ ಚಲಾಯಿಸುತ್ತಿದ್ದಾಗ ಲಾರಿಯಲ್ಲಿದ್ದ  ನೂರಾರು ಕಬ್ಬಿಣದ ಶೀಟ್ ಗಳು ರಸ್ತೆಗೆ ಬಿದ್ದಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ತಕ್ಷಣ ಸ್ಥಳೀಯರು ಇಬ್ಬರನ್ನೂ ಶೀಟ್ ಗಳ ಅಡಿಯಿಂದ ಹೊರತರಲು ಪ್ರಯತ್ನಿಸಿದರೂ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.

ಈ ಬಗ್ಗೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ



Join Whatsapp