ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿ: ಇಬ್ಬರು ಭಾರತೀಯರು ಸೇರಿ ಮೂವರು ಸಾವು

Prasthutha|

ದುಬೈ: ಅಬುಧಾಬಿಯ ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಂಕಿತ ಡ್ರೋನ್ ದಾಳಿ ವರದಿಯಾಗಿದೆ. ಕೊಲ್ಲಿ ರಾಷ್ಟ್ರದ ಅಧಿಕಾರಿಗಳು ರಾಜಧಾನಿ ಅಬುಧಾಬಿಯಲ್ಲಿ ಎರಡು ಬೆಂಕಿ ಗಳು ಡ್ರೋನ್ ಗಳಿಂದ ಸಂಭವಿಸಿರಬಹುದು ಎಂದು ವರದಿ ಮಾಡಿದ ನಂತರ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೇಲೆ ದಾಳಿ ನಡೆಸಿರುವುದಾಗಿ ಯೆಮೆನ್ ನ ಇರಾನ್ ಸಂಯೋಜಿತ ಹೌತಿ ಬಂಡುಕೋರರು ದಾಳಿಯ ಹೊಣೆ ಹೊತ್ತಿದ್ದಾರೆಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

- Advertisement -

ಹೊಸ ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಇಂಧನ ಸಾಗಿಸುವ ಮೂರು ಟ್ಯಾಂಕರ್ ಗಳ ಕಡೆಗೆ ಈ ದಾಳಿಯನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಮೂರು ತೈಲ ಟ್ಯಾಂಕರ್ ಗಳಲ್ಲಿ ಬೆಂಕಿ ಮತ್ತು ಸ್ಫೋಟ ವರದಿಯಾಗಿದೆ ಮತ್ತು ಯುಎಇಯ ಹೊಸ ವಿಮಾನ ನಿಲ್ದಾಣದ ನಿರ್ಮಾಣ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಬುಧಾಬಿ ಪೊಲೀಸರು ತಿಳಿಸಿದ್ದಾರೆ.ತೈಲ ಸಂಸ್ಥೆ ಎಡಿಎನ್ ಒಸಿಯ ಶೇಖರಣಾ ಸೌಲಭ್ಯಗಳ ಬಳಿಯ ಕೈಗಾರಿಕಾ ಮುಸಾಫಾ ಪ್ರದೇಶದಲ್ಲಿ ಮೂರು ಇಂಧನ ಟ್ಯಾಂಕರ್ ಟ್ರಕ್ ಗಳು ಸ್ಫೋಟಗೊಂಡಿದೆ ಮತ್ತು ಅಬುಧಾಬಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಬುಧಾಬಿ ಪೊಲೀಸರು ತಿಳಿಸಿದ್ದಾರೆ.

“ಸ್ಫೋಟ ಮತ್ತು ಬೆಂಕಿಗೆ ಕಾರಣವಾದ ಎರಡೂ ಸ್ಥಳಗಳಲ್ಲಿ ಡ್ರೋನ್ ನಿಂದ ಆಗಿರಬಹುದಾದ ಸಣ್ಣ ವಿಮಾನದ ಭಾಗಗಳನ್ನು ಆರಂಭಿಕ ತನಿಖೆಯಲ್ಲಿ ಪತ್ತೆ ಹಚ್ಚಲಾಗಿದೆ” ಎಂದು ಪೊಲೀಸರು ರಾಜ್ಯ ಸುದ್ದಿ ಸಂಸ್ಥೆ ಡಬ್ಲ್ಯುಎಎಂ ನಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.



Join Whatsapp