ಮಹಾರಾಷ್ಟ್ರದಲ್ಲಿ ಕೇವಲ 10 ನಿಮಿಷಗಳ ಅಂತರದಲ್ಲಿ ಎರಡು ಭೂಕಂಪಗಳು ಸಂಭವಿಸಿವೆ.
ಮಹಾರಾಷ್ಟ್ರದ ಹಿಂಗೋಲಿ ನಗರದಲ್ಲಿ ಗುರುವಾರ ಮುಂಜಾನೆ 10 ನಿಮಿಷಗಳ ಅಂತರದಲ್ಲಿ 4.5 ಹಾಗೂ 3.6 ತೀವ್ರತೆಯ ಭೂಕಂಪಗಳು ವರದಿಯಾಗಿವೆ. ಇದು ನಗರದ 10 ಕಿ.ಮೀ ಆಳದಲ್ಲಿ ಸಂಭವಿಸಿದೆ. ಬೆಳಗ್ಗೆ 6.19ರ ಸುಮಾರಿಗೆ ಎರಡನೇ ಭೂಕಂಪದ ಅನುಭವವಾಗಿದೆ.
ಭೂಕಂಪದಿಂದ ಯಾವುದೇ ಆಸ್ತಿ-ಪಾಸ್ತಿ ಹಾನಿ ಅಥವಾ ಪ್ರಾಣ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಮರಾಠವಾಡದ ನಾಂದೇಡ್, ಪರ್ಭಾನಿ, ಹಿಂಗೋಲಿ ಪ್ರದೇಶಗಳಲ್ಲಿ ಇಂದು ಬೆಳಗ್ಗೆ ಭೂಕಂಪನದ ಅನುಭವವಾಗಿದೆ. ಹಲವರು ಭಯಭೀತರಾಗಿ ಮನೆಯಿಂದ ಹೊರಗೆ ಬಂದರು. ನಾಂದೇಡ್‌ನ ಉತ್ತರ ಭಾಗದಲ್ಲಿ ಭೂಕಂಪನದ ಅನುಭವವಾಗಿದೆ.