ಇಂದಿನಿಂದ ಎರಡು ದಿನ ಅಬುಧಾಬಿ ಯುವರಾಜರ ಭಾರತ ಪ್ರವಾಸ

Prasthutha|

ನವದೆಹಲಿ: ಅಬುಧಾಬಿ ಯುವರಾಜ ಶೇಖ್‌ ಖಾಲೀದ್ ಬಿನ್‌ ಮುಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್‌ ಅವರು ಇಂದಿನಿಂದ ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.

- Advertisement -

ಅಬುಧಾಬಿ ಯುವರಾಜನ ಎರಡು ದಿನಗಳ ಪ್ರವಾಸ ಭಾನುವಾರದಿಂದ ಆರಂಭವಾಗಲಿದ್ದು, ಅವರ ಜೊತೆಗೆ ಯುಎಇ ಸರ್ಕಾರದ ಹಲವು ಸಚಿವರು ಹಾಗೂ ವಾಣಿಜ್ಯ ಪ್ರತಿನಿಧಿಗಳ ನಿಯೋಗ ಇರಲಿದೆ. ಅವರು ಭಾರತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ದ್ವಿಪಕ್ಷೀಯ ವಿಷಯಗಳ ಜೊತೆಗೆ ಇಸ್ರೇಲ್-ಹಮಾಸ್ ಸಂಘರ್ಷದ ಪರಿಸ್ಥಿತಿ ಬಗ್ಗೆಯೂ ಈ ಸಂದರ್ಭ ಚರ್ಚಿಸುವ ನಿರೀಕ್ಷೆ ಇದೆ.

- Advertisement -

ಈ ಭೇಟಿಯು ಸಂಯುಕ್ತ ಅರಬ್ ಸಂಸ್ಥಾನ (ಯುಎಇ) ಮತ್ತು ಭಾರತ ನಡುವಣ ಬಾಂಧವ್ಯ ಮತ್ತಷ್ಬು ಬಲಪಡಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಶೇಖ್‌ ಖಾಲೀದ್ ಬಿನ್‌ ಮುಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್‌ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗುವ ಸಾಧ್ಯತೆ ಇದ್ದು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸಮಾಧಿ ಸಂದರ್ಶಸಲಿದ್ದಾರೆ.



Join Whatsapp