ಡ್ರಗ್ಸ್ ಪೆಡ್ಲರ್ ​ಗಳಿಂದ ಗಾಂಜಾ ಖರೀದಿಸಿ ಮಾರಾಟ ಇಬ್ಬರು ಪೇದೆಗಳ ವಿಚಾರಣೆ

Prasthutha|

ಬೆಂಗಳೂರು: ಡ್ರಗ್ಸ್ ಪೆಡ್ಲರ್​ಗಳಿಂದ ಗಾಂಜಾ ಖರೀದಿಸಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಭದ್ರತಾ ಕಾರ್ಯದಲ್ಲಿದ್ದ ಇಬ್ಬರು ಪೊಲೀಸ್ ಪೇದೆಗಳನ್ನು  ಆರ್ ಟಿ‌ನಗರ ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.

- Advertisement -

ಆರ್ ಟಿನಗರದ ಬಸವರಾಜ ಬೊಮ್ಮಾಯಿ ಅವರ ನಿವಾಸದ ಭದ್ರತಾ ಕಾರ್ಯದಲ್ಲಿದ್ದ

ಕೋರಮಂಗಲ ಪೊಲೀಸ್ ಠಾಣೆಯ ಪೇದೆಗಳಾದ ಶಿವಕುಮಾರ್ ಹಾಗೂ ಸಂತೋಷ್ ನನ್ನು ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

- Advertisement -

ಪೇದೆಗಳಿಬ್ಬರು ಇಂದು ಬೆಳಿಗ್ಗೆ ಮುಖ್ಯಮಂತ್ರಿ ಮನೆಯ ಆರ್.ಟಿ.ನಗರದ 80 ಅಡಿ ರಸ್ತೆಯ

ಬಳಿಯೇ ಡ್ರಗ್ಸ್ ಪೆಡ್ಲರ್ ಗಳಾದ  ಅಖಿಲ್ ರಾಜ್ ಹಾಗೂ ಅಮ್ಜದ್ ಖಾನ್​ ನಿಂದ ಆರ್.ಟಿ.ನಗರದ 80 ಅಡಿ ರಸ್ತೆ ಬಳಿ ಗಾಂಜಾ ಡೀಲ್​ ಮಾಡುತ್ತಿದ್ದರು.

ಪೆಡ್ಲರ್​ಗಳಿಂದ ಗಾಂಜಾ ಪಡೆದು ಹಣ ಕೊಡದೇ ಹಲ್ಲೆಗೆ ಮುಂದಾಗಿದ್ದರು. ಇದೇ ಸಂದರ್ಭದಲ್ಲಿ  ಮನೆ ಮುಂದೆ ಗಸ್ತು ತಿರುಗುತ್ತಿದ್ದ ಹೊಯ್ಸಳ ಸಿಬ್ಬಂದಿಗೆ ಅನುಮಾನ ಬಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿಯೇ ಗಾಂಜಾ ದಂಧೆಗಿಳಿದಿರುವುದನ್ನು ಕಂಡು ದಂಗಾಗಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.



Join Whatsapp