ಛತ್ತೀಸ್ ಘಡದಲ್ಲಿ ಮುಂದುವರಿದ ಕ್ರೈಸ್ತರ ಮೇಲಿನ ದಾಳಿ: ಬೈಬಲ್ ಸುಟ್ಟು, ಪಾದ್ರಿಗಳಿಗೆ ಥಳಿಸಿದ ಸಂಘಪರಿವಾರದ ಕಾರ್ಯಕರ್ತರು

Prasthutha|

ನವದೆಹಲಿ: ಛತ್ತೀಸ್ ಘಡದ ಧಮ್ತೇರಿ ಜಿಲ್ಲೆಯಲ್ಲಿ ಇಬ್ಬರು ಕ್ರಿಶ್ಚಿಯನ್ ಪಾದ್ರಿಗಳನ್ನು ಸಂಘಪರಿವಾರದ ದುಷ್ಕರ್ಮಿಗಳ ಗುಂಪೊಂದು ನಿರ್ದಯವಾಗಿ ಥಳಿಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ.

- Advertisement -

ಆಕ್ರೋಶಿತ ಸಂಘಪರಿವಾರದ ಗುಂಪು, ಚರ್ಚ್ ಗೆ ಅಕ್ರಮ ಪ್ರವೇಶಗೈದು ಪ್ರಾರ್ಥನಾ ಸಭೆಗೆ ಅಡ್ಡಿಪಡಿಸಿತು. ಈ ವೇಳೆ ಅಲ್ಲಿದ್ದ ಇಬ್ಬರು ಪಾದ್ರಿಗಳಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಬೈಬಲ್ ಗಳನ್ನು ಸುಟ್ಟು ಹಾಕಿದರು. ಮಾತ್ರವಲ್ಲ ಕ್ರಿಶ್ಚಿಯನ್ ಧಾರ್ಮಿಕ ಪೂಜೆಯನ್ನು ನಿಲ್ಲಿಸುವಂತೆ ಒತ್ತಾಯಿಸಿ ದಾಂಧಲೆ ನಡೆಸಿದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಂಜೆ 4 ಗಂಟೆ ಸುಮಾರಿಗೆ ರಜನಿಕಾಂತ್ ದೇವಘನ್ ಮತ್ತು ನೀಲಾಂಬರಿ ಸಾಹು ನೇತೃತ್ವದ ಸಂಘಪರಿವಾರದ ಗುಂಪು ಪ್ರಾರ್ಥನಾ ಸಭೆಗೆ ಅಡ್ಡಿಪಡಿಸಿ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಈ ವೇಳೆ ಪ್ರಾರ್ಥನೆ ಬೋಧಿಸುತ್ತಿದ್ದ ಪಾದ್ರಿಗಳಾದ ಶರತ್ ಮಾಣಿಕಪುರಿ ಮತ್ತು ಕೇಸರ್ ಮಾಣಿಕಪುರಿ ಎಂಬವರನ್ನು ಸಂಘಪರಿವಾರದ ಗುಂಪು ಎಳೆದೊಯ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸಿದೆ.

- Advertisement -

ಕ್ರಿಶ್ಚಿಯನ್ನರನ್ನು ಮೂಲ ಹಿಂದೂ ಧರ್ಮಕ್ಕೆ ಹಿಂದಿರುಗುವಂತೆ ಒತ್ತಾಯಿಸಿದರಲ್ಲದೆ, ಪೂಜಾ ಕಾರ್ಯಕ್ರಮವನ್ನು ಮುಂದುವರಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಸ್ಥಳೀಯರು ದೂರಿದ್ದಾರೆ.

Join Whatsapp