ವಂದೇ ಭಾರತ್ ರೈಲಿಗೆ ಕಲ್ಲು ಹೊಡೆತ: ಮಕ್ಕಳಿಬ್ಬರು ವಶಕ್ಕೆ

Prasthutha|

ದಾವಣಗೆರೆ: ವಂದೇ ಭಾರತ್ ರೈಲಿಗೆ ಕಲ್ಲು ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ವರ್ಷದ ಇಬ್ಬರು ಮಕ್ಕಳನ್ನು ರೈಲ್ವೆ ಪೊಲೀಸರು ದಾವಣಗೆರೆಯಲ್ಲಿ ವಶಕ್ಕೆ ಪಡೆದಿದ್ದಾರೆ.

- Advertisement -

ವಂದೇ ಭಾರತ್ ರೈಲು ಧಾರವಾಡದಿಂದ ದಾವಣಗೆರೆಗೆ ಆಗಮಿಸುತ್ತಿದ್ದ ಸಂದರ್ಭ ಇಬ್ಬರು ಮಕ್ಕಳು ರೈಲಿಗೆ ಕಲ್ಲು ಹೊಡೆದಿದ್ದು, ಕಲ್ಲಿನ ಹೊಡೆತಕ್ಕೆ ರೈಲಿನ ಕಿಟಕಿ ಗಾಜು ಬಿರುಕು ಬಿಟ್ಟಿತ್ತು. ಈ ಹಿನ್ನೆಲೆ ಇಬ್ಬರು ಮಕ್ಕಳನ್ನು ಆರ್‌ ಪಿಎಫ್ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Join Whatsapp