ಲುಲು ಮಾಲ್‌ನಲ್ಲಿ ಹನುಮಾನ್ ಚಾಲೀಸಾ ಪಠಣ: ಇಬ್ಬರ ಬಂಧನ

Prasthutha|

► ► ನಮಾಝ್‌ ವಿವಾದವಾಗಿಸಿದ್ದ ಸಂಘಪರಿವಾರ

- Advertisement -

ಲಕ್ನೋ: ಇಲ್ಲಿನ ಲುಲು ಮಾಲ್‌ನಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಈ ಬಂಧನದ ಬೆನ್ನಲ್ಲೇ ಮಾಲ್ ಮಾಲ್‌ಗೆ ಪ್ರವೇಶಿಸಲು ಯತ್ನಿಸಿ ಅಶಾಂತಿ ಸೃಷ್ಟಿಸಿದ್ದ ಸುಮಾರು 15 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾಲ್‌ನೊಳಗೆ ಪ್ರವೇಶಿಸಿದ್ದ ಈ ಇಬ್ಬರು ವ್ಯಕ್ತಿಗಳು ನೆಲದ ಮೇಲೆ ಕುಳಿತು ಧಾರ್ಮಿಕ ಪ್ರಾರ್ಥನೆಗಳನ್ನು ಹೇಳಲು ಆರಂಭಿಸಿದ್ದರು. ಕೂಡಲೇ ಮಾಲ್‌ನ ಭದ್ರತಾ ಸಿಬ್ಬಂದಿಗಳು ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತ ಗೋಪಾಲಕೃಷ್ಣ ಚೌಧರಿ ಹೇಳಿದ್ದಾರೆ‌

- Advertisement -

ಬಳಿಕ ಕೆಲ ಬಲಪಂಥೀಯ ಕಾರ್ಯಕರ್ತರು ಮಾಲ್‌ನೊಳಗೆ ನುಗ್ಗಲು ಯತ್ನಸಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದು ಎಚ್ವರಿಕೆ ನೀಡಿ ಕಳುಹಿಸಿದ್ದಾರೆ.

ಲುಲು ಮಾಲ್‌ನಲ್ಲಿ ಇತ್ತೀಚೆಗೆ ಸಣ್ಣ ಗುಂಪೊಂದು ನಮಾಝ್‌ನಲ್ಲಿ ನಿರತವಾಗಿದ್ದ ವೀಡಿಯೋ ವೈರಲ್ ಆಗಿದ್ದು, ಇದಕ್ಕೆ ಸಂಘಪರಿವಾರ ಆಕ್ಷೇಪ ವ್ಯಕ್ತಪಡಿಸಿ ವಿವಾದ ಮಾಡಿದ್ದಲ್ಲದೇ, ಹನುಮಾನ್ ಚಾಲೀಸಾ ಪಠಣಕ್ಕೆ ಅವಕಾಶ ಮಾಡಿಕೊಡಬೇಕೆಂದು ಮಾಲ್‌ನ ಆಡಳಿತ ಮಂಡಳಿಯ ಜೊತೆ ಮನವಿ ಮಾಡಿತ್ತು. ಆದರೆ ಆಡಳಿತ ಮಂಡಳಿ ಇದಕ್ಕೆ ಅವಕಾಶ ನೀಡಿರಲಿಲ್ಲ.

ಆ ಬಳಿಕ ‘ಇಲ್ಲಿ ಯಾವುದೇ ಧಾರ್ಮಿಕ ಪ್ರಾರ್ಥನೆಗೆ ಅವಕಾಶ ಇಲ್ಲ’ ಎಂಬ ನೋಟಿಸ್ ಮಾಲ್‌’ನಾದ್ಯಂತ ಹಾಕಲಾಗಿತ್ತು.



Join Whatsapp