ಸಲ್ಮಾನ್ ಖಾನ್ ನಿವಾಸದ ಹೊರಗೆ ಗುಂಡಿನ ದಾಳಿ: ಇಬ್ಬರು ಆರೋಪಿಗಳ ಬಂಧನ

Prasthutha|

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಹೊರಗೆ ಗುಂಡು ಹಾರಿಸಿದ ಪ್ರಕರಣ ಸಂಬಂಧ ಮುಂಬೈ ಕ್ರೈಂ ಬ್ರಾಂಚ್ ಇಬ್ಬರು ಆರೋಪಿಗಳನ್ನು ಬಂಧಿಸಿದೆ.

- Advertisement -


ಬಂಧಿತ ಆರೋಪಿಗಳನ್ನು ಬಿಹಾರದ ನಿವಾಸಿಗಳಾದ ವಿಕ್ಕಿ ಗುಪ್ತಾ (24) ಹಾಗೂ ಸಾಗರ್ ಪಾಲ್ (21) ಎಂದು ಗುರುತಿಸಲಾಗಿದ್ದು, ಅವರನ್ನು ಗುಜರಾತ್ ನ ಕುಛ್ ಜಿಲ್ಲೆಯ ಮಾತಾ ನೊ ಮಧ್ ಗ್ರಾಮದಿಂದ ಬಂಧಿಸಲಾಗಿದೆ ಎಂದು ಪಶ್ಚಿಮ ಕುಛ್ ವಲಯದ ಉಪ ಪೊಲೀಸ್ ಮಹಾ ನಿರೀಕ್ಷಕ ಮಹೇಂದ್ರ ಬಗಾದಿಯ ತಿಳಿಸಿದ್ದಾರೆ.


ಸಲ್ಮಾನ್ ಖಾನ್ ನಿವಾಸದೆದುರು ಗುಂಡಿನ ದಾಳಿ ನಡೆಸಲು ಇಬ್ಬರು ಬಂದೂಕುಧಾರಿಗಳಾದ ಪಾಲ್ ಹಾಗೂ ಗುಪ್ತಾನನ್ನು ಕುಖ್ಯಾತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ನಿಯೋಜಿಸಿದ್ದ ಎಂಬುದು ಪ್ರಾಥಮಿಕ ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ.



Join Whatsapp