ಖಾತೆ ನಿರ್ಬಂಧಿಸಲು ಸೂಚನೆ ; ಕೇಂದ್ರದೊಂದಿಗೆ ಮಾತುಕತೆಗೆ ಸಿದ್ದ ಎಂದ ಟ್ವಿಟ್ಟರ್

Prasthutha|

- Advertisement -

ಹೊಸದಿಲ್ಲಿ : ರೈತರ ಹೋರಾಟಕ್ಕೆ ಸಂಬಂಧಿಸಿದಂತೆ 1,178 ಖಾತೆಗಳನ್ನು ನಿರ್ಬಂಧಿಸಲು ಆದೇಶಿಸಿದ ಬಗ್ಗೆ ಚರ್ಚಿಸಲು ಸಿದ್ಧ ಎಂದು ಟ್ವಿಟರ್ ಕೇಂದ್ರ ಸರಕಾರಕ್ಕೆ ತಿಳಿಸಿದೆ. ಈ ಬಗ್ಗೆ ಕೇಂದ್ರ ಐಟಿ ಸಚಿವಾಲಯ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರಿಗೂ ಟ್ವಿಟರ್ ಮಾಹಿತಿ ನೀಡಿದೆ. ತಾವು ನೌಕರರ ಸುರಕ್ಷತೆಗೆ ಪ್ರಾಮುಖ್ಯತೆ ನೀಡುವುದಾಗಿ ಟ್ವಿಟರ್ ವಕ್ತಾರರು ತಿಳಿಸಿದ್ದಾರೆ.

ರೈತರ ಹೋರಾಟವನ್ನು ಉತ್ತೇಜಿಸಲಾಗುತ್ತಿದೆ ಎಂದು ಟ್ವಿಟರ್ ಮತ್ತು ಕೇಂದ್ರ ಸರ್ಕಾರದ ನಡುವೆ ಭಿನ್ನಾಭಿಪ್ರಾಯವಿತ್ತು. ಕೇಂದ್ರ ಸರಕಾರದ ಕೋರಿಕೆಯ ಮೇರೆಗೆ 257 ಖಾತೆಗಳನ್ನು ನಿರ್ಬಂಧಿಸಲಾಗಿತ್ತು. ಆದರೆ ನಂತರ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಬರುತ್ತದೆ ಮತ್ತು ಅನೇಕ ಟ್ವೀಟ್‌ಗಳು ಸುದ್ದಿಗೆ ಯೋಗ್ಯವಾಗಿವೆ ಎಂದು ಅಮಾನತನ್ನು ಹಿಂಪಡೆಯಲಾಗಿತ್ತು. ಖಾತೆಗಳಿಗೆ ಪಾರದರ್ಶಕತೆ ಮುಖ್ಯ ಮತ್ತು ಮುಕ್ತ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಆದ್ಯತೆ ನೀಡುತ್ತೇವೆ ಎಂದು ಟ್ವಿಟರ್ ಸ್ಪಷ್ಟಪಡಿಸಿತ್ತು. ಅದೇ ವೇಳೆ ತಾವು ಕಾನೂನುಗಳನ್ನು ಗೌರವಿಸಿ ಮುಂದುವರಿಯುತ್ತೇವೆ. ಕಾನೂನು ವಿರೋಧಿ ಹಿನ್ನೆಲೆಯುಳ್ಳ ಖಾತೆಗಳನ್ನು ನಿಷೇಧಿಸಲಾಗುವುದು ಎಂದು ಟ್ವಿಟರ್ ಎಚ್ಚರಿಸಿತ್ತು. ಇದರ ಬೆನ್ನಲ್ಲೇ ಟ್ವಿಟರ್ ನೌಕರರ ವಿರುದ್ಧ ಏಳು ವರ್ಷಗಳ ಜೈಲು ಶಿಕ್ಷೆ ಅನುಭವಿಸಬಹುದಾದ ಪ್ರಕರಣ ದಾಖಲಿಸಲಾಗುವುದು ಎಂದು ಕೇಂದ್ರ ಸರಕಾರ ಎಚ್ಚರಿಸಿತ್ತು. ಈ ಹಿನ್ನೆಲೆಯಲ್ಲಿಯೇ ಟ್ವಿಟರ್ ಕೇಂದ್ರ ಸರಕಾರದೊಂದಿಗೆ ಚರ್ಚೆಗೆ ಸಿದ್ಧತೆ ನಡೆಸುತ್ತಿದೆ.



Join Whatsapp