PFI ಟ್ವಿಟ್ಟರ್ ಖಾತೆಗೆ ವೆರಿಫೈ ಬ್ಯಾಜ್ | ಜಾಲತಾಣಗಳಲ್ಲಿ ಹತಾಶ ಸಂಘಪರಿವಾರದ ರೋದನ !

Prasthutha|

►ಯೂಟ್ಯೂಬರ್ನ ಪ್ರಚೋದನಾತ್ಮಕ ವೀಡಿಯೋಗೆ ನೆಟ್ಟಿಗರ ಆಕ್ರೋಶ

- Advertisement -

ಸಮಾಜಮುಖಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕರ್ನಾಟಕದ ಟ್ವಿಟ್ಟರ್ ಖಾತೆಗೆ ಟ್ವಿಟ್ಟರ್ ಇಂಡಿಯಾ ಸಂಸ್ಥೆಯು ಅಧಿಕೃತ ವೆರಿಫೈ ಬ್ಯಾಜ್ ಇತ್ತಿಚೆಗೆ ನೀಡಿತ್ತು. ಆದರೆ ಮುಖ್ಯವಾಹಿನಿಯ ಮಾಧ್ಯಮಗಳನ್ನು ಮಾತ್ರವಲ್ಲ, ಸಾಮಾಜಿಕ ಜಾಲತಾಣದ ಮೇಲೂ ತಮ್ಮ ಕರಾಳ ಹಸ್ತ ಚಾಚಲು ವಿಫಲ ಪ್ರಯತ್ನ ನಡೆಸುತ್ತಿರುವ ಬಿಜೆಪಿ ಮತ್ತು ಸಂಘಪರಿವಾರಕ್ಕೆ  ಇದು ನುಂಗಲಾರದ ತುತ್ತಾಗಿದೆ. ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಸಂಘಪರಿವಾರದ ನಾಯಕರು ಇದರಿಂದ ಹತಾಶೆಗೊಂಡಂತೆ ಕಾಣುತ್ತಿದೆ. ಎಂದಿನಂತೆ ಸುಳ್ಳುಗಳ ಮೂಲಕ ಜನರನ್ನು ಪ್ರಚೋದಿಸುತ್ತಾ ಟ್ವಿಟ್ಟರ್ ಇಂಡಿಯಾ ಸಂಸ್ಥೆಯನ್ನೇ ಪ್ರಮುಖ ಗುರಿಯಾಗಿಸಿದ್ದಾರೆ. ಟ್ವಿಟ್ಟರ್ ಭಾರತ ವಿರೋಧಿ ನಿಲುವು ತಾಳುತ್ತಿದೆ ಎಂದು ಆರೋಪಿಸಿದ್ದಾರೆ.

ಇತ್ತಿಚೆಗೆ ಶಾಮ್ ಶರ್ಮಾ ಎನ್ನುವ ಯೂಟ್ಯೂಬರ್ ಒಬ್ಬ ಕೂಡಾ ಈ ಕುರಿತು ವೀಡಿಯೋ ಮಾಡಿದ್ದು, ಹಲವು ಪ್ರಚೋದನಾತ್ಮಕ ಕಟ್ಟುಕಥೆಗಳ ಮೂಲಕ ಸುಳ್ಳು ಹರಡುವ ಪ್ರಯತ್ನ ಮಾಡಿದ್ದ. ನೆಟ್ಟಿಗರು ಆತನ ವೀಡಿಯೋ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ಕೋವಿಡ್ ಪ್ರಥಮ ಮತ್ತು ದ್ವಿತೀಯ ಅಲೆಯ ವೇಳೆ ಪಿಎಫ್ಐ ಸಂಘಟನೆ ಮಾಡಿದ್ದ ಮಾನವೀಯ ಸೇವೆಗಳ ಕುರಿತು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಈ ಕುರಿತು ಯಾವುದೇ ಉಲ್ಲೇಖ ಮಾಡದೆ ಕೇವಲ ಪಿಎಫ್ಐಯನ್ನು ನಕಾರಾತ್ಮಕವಾಗಿ ಬಿಂಬಿಸಲು ಪ್ರಯತ್ನಿಸಲಾಗಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದರು.

- Advertisement -

ಬಿಜೆಪಿ ಸರಕಾರ ಆಡಳಿತಕ್ಕೆ ಬಂದಾಗಿನಿಂದ ಹಲವು ಮುಂಚೂಣಿ ಮಾಧ್ಯಮಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿರುವುದರ ಕುರಿತು ಆರೋಪಗಳೆದ್ದಿದ್ದವು.  ಜೊತೆಗೆ ಚುನಾವಣಾ ಸಮಯದಲ್ಲಿ ಫೇಸ್ಬುಕ್ ಸಂಸ್ಥೆಯನ್ನು ಕೂಡಾ ತಮಗೆ ಬೇಕಾದ ಹಾಗೆ ಬಳಸಿಕೊಂಡದ್ದು ಕಳೆದ ವರ್ಷ ಬಹಿರಂಗಗೊಂಡಿತ್ತು. ಇತ್ತೀಚೆಗೆ ಟ್ವಿಟ್ಟರ್ ಸಂಸ್ಥೆಯನ್ನು ಗುರಿಯಾಗಿಸಿಕೊಂಡಿರುವ ಬಿಜೆಪಿ ಸರ್ಕಾರ, ಒಂದಲ್ಲೊಂದು ಕಾರಣ ನೀಡಿ ಟ್ವಿಟ್ಟರ್ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿದೆ. ಇದೀಗ PFIಗೆ ಅಧಿಕೃತ ವೆರಿಫೈ ಬ್ಯಾಜ್ ನೀಡಿರುವುದನ್ನೂ ಕೂಡಾ ಅದರ ಜೊತೆಗೆ ತಾಳೆ ಹಾಕುತ್ತಿದ್ದಾರೆ.



Join Whatsapp