ದಿಲ್ಲಿ, ಮುಂಬೈ ಕಚೇರಿಗಳನ್ನು ಮುಚ್ಚಿದ ಟ್ವಿಟ್ಟರ್: ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ಮಾಡಲು ಹೇಳಿದ ಮಸ್ಕ್

Prasthutha|

ನವದೆಹಲಿ: ಭಾರತದ ಟ್ವಿಟರ್ ಕಚೇರಿಗಳ ಶೇಕಡಾ 90ಕ್ಕೂ ಹೆಚ್ಚು ನೌಕರರನ್ನು ಕಳೆದ ವರ್ಷ ಹೊರ ಹಾಕಿದ್ದ ಟ್ವಿಟರ್ ಇಂದು ತನ್ನ ದಿಲ್ಲಿ ಮತ್ತು ಮುಂಬೈಯ ಕಚೇರಿಗಳನ್ನು ಮುಚ್ಚಿದೆ.

- Advertisement -


ಭಾರತದಲ್ಲಿ ಟ್ವಿಟರ್ ಇನ್ಕ್. ಹೊಂದಿರುವ ಮೂರು ಕಚೇರಿಗಳಲ್ಲಿ ಎರಡನ್ನು ಮುಚ್ಚಿರುವ ಸಂಸ್ಥೆಯು ಸಿಬ್ಬಂದಿಗೆ ಮನೆಯಲ್ಲೇ ಕೆಲಸ ಮಾಡಲು ಹೇಳಿದೆ. ಎಲಾನ್ ಮಸ್ಕ್ ಅವರ ವೆಚ್ಚ ಕಡಿತದಲ್ಲಿ ಸಾಮಾಜಿಕ ಜಾಲ ಸೇವೆ ಒದಗಿಸಲು ಟ್ವಿಟರ್ ಒದ್ದಾಡುತ್ತಿರುವುದಾಗಿ ಹೇಳಲಾಗಿದೆ.


ಬೆಂಗಳೂರಿನ ಕಚೇರಿಯನ್ನು ಮಾತ್ರ ಮುಚ್ಚಿಲ್ಲ; ಅಲ್ಲಿ ಕೆಲಸ ಮಾಡುವವರೆಲ್ಲ ಎಂಜಿನಿಯರ್’ಗಳು.
ಸಿಇಓ ಮಸ್ಕ್ ಅವರು ಸಂಸ್ಥೆಯ ಹಣಕಾಸು ಸ್ಥಿತಿಯನ್ನು 2023ರಲ್ಲಿ ಭದ್ರ ಪಡಿಸಿಯೇ ಪಡಿಸುತ್ತೇನೆ ಎನ್ನುತ್ತಿದ್ದು, ಇಂತಹ ಹಲವು ವೆಚ್ಚ ಕಡಿತಗಳನ್ನು ಮಾಡುತ್ತಿದ್ದಾರೆ. ಭಾರತದಲ್ಲಿ ಮೆಟಾ, ಆಲ್ಫಾಬೆಟ್, ಗೂಗಲ್’ಗಳಷ್ಟು ಟ್ವಿಟರ್ ಗಟ್ಟಿ ಮಾರುಕಟ್ಟೆ ಹೊಂದಿಲ್ಲ ಎನ್ನುವುದು ಮಸ್ಕ್ ಅಭಿಪ್ರಾಯವಾಗಿದೆ.

- Advertisement -


ಪ್ರಧಾನಿ ಮೋದಿಯವರ 8.65 ಕೋಟಿ ಟ್ವಿಟರ್ ಅನುಯಾಯಿಗಳು ಭಾರೀ ಲಗ್ಗೆ ಹಾಕಿದರೂ ಟ್ವಿಟರ್ ಭಾರತದಲ್ಲಿ ಗಳಿಸುತ್ತಿರುವುದು ಏನಿಲ್ಲ ಎಂದೇ ಹೇಳಲಾಗುತ್ತಿದೆ.
ಆರ್ಥಿಕವಾಗಿ 2023ರ ಅಂತ್ಯದೊಳಗೆ ಸದೃಢವಾದರೆ ಮಾತ್ರ ಟ್ವಿಟರ್’ಗೆ ಅಂಟಿಕೊಳ್ಳುತ್ತೇನೆ ಎಂಬ ಮಾತನ್ನು ಸಹ ಮಸ್ಕ್ ಹೇಳಿರುವರು ಎನ್ನಲಾಗಿದೆ.
ಮಸ್ಕ್ ಟ್ವಿಟರನ್ನು 44 ಬಿಲಿಯ ಡಾಲರಿಗೆ ಖರೀದಿಸಿದ ಮೇಲೆ ಅದರ ಸ್ಯಾನ್ ಫ್ರಾನ್ಸಿಸ್ಕೋದ ಮುಖ್ಯ ಮುಖ್ಯ ಕಚೇರಿ ಮತ್ತು ಲಂಡನ್ ಕಚೇರಿಗಳ ಬಾಡಿಗೆ ಕಟ್ಟುವುದು ನನೆಗುದಿಗೆ ಬಿದ್ದಿದೆ. ಕೆಲವು ಕಟ್ಟಡಗಳು ಅನಗತ್ಯ ಎಂಬುದು ಮಸ್ಕ್ ಅಭಿಮತ.



Join Whatsapp