ಸಾರ್ವಜನಿಕರ ನಂಬಿಕೆಗೆ ಅರ್ಹವಾಗಬೇಕಾದರೆ ಟ್ವಿಟರ್ ರಾಜಕೀಯವಾಗಿ ತಟಸ್ಥವಾಗಿರಬೇಕು: ಎಲಾನ್ ಮಸ್ಕ್

Prasthutha|

ವಾಷಿಂಗ್ಟನ್: ಟ್ವಿಟರ್ ಸಾರ್ವಜನಿಕರ ನಂಬಿಕೆಗೆ ಅರ್ಹವಾಗಬೇಕಾದರೆ ಅದು ರಾಜಕೀಯವಾಗಿ ತಟಸ್ಥವಾಗಿರಬೇಕು ಎಂದು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ್ದಾರೆ.

- Advertisement -

ಎಲಾನ್ ಮಸ್ಕ್ ಟ್ವಿಟರ್ ಮೇಲೆ ಹಿಡಿತ ಸಾಧಿಸಿದ ಬೆನ್ನೆಲ್ಲೇ ಮೈಕ್ರೋಬ್ಲಾಗಿಂಗ್ ಸೈಟ್ ಸಾರ್ವಜನಿಕರು ನಂಬಿಕೆಗೆ ಅರ್ಹವಾಗಬೇಕಾದರೆ ಅದು ರಾಜಕೀಯವಾಗಿ ತಟಸ್ಥವಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ 44 ಬಿಲಿಯನ್ ಡಾಲರ್ (3.36 ಲಕ್ಷ ಕೋಟಿ) ಮೊತ್ತಕ್ಕೆ ಟ್ವಿಟರ್ ನ ಪೂರ್ತಿ ಷೇರು ಎಲಾನ್ ಮಸ್ಕ್ ಪಾಲಾಗಿದೆ.

Join Whatsapp