‘ಟ್ವಿಟ್ಟರ್ ಕಿಲ್ಲರ್’ ಗೆ ಮರಣ ದಂಡನೆ

Prasthutha|

ಟೋಕಿಯೊ, ಜಪಾನ್: ಆನ್ ಲೈನ್ ನಲ್ಲಿ ಭೇಟಿಯಾದ ಒಂಬತ್ತು ಮಂದಿಯನ್ನು ಹತ್ಯೆಗೈದು ಅಂಗಾಂಗಗಳನ್ನು ಕತ್ತರಿಸಿದ  “ಟ್ವಿಟ್ಟರ್ ಕಿಲ್ಲರ್” ಎಂದೇ ಕುಖ್ಯಾತನಾದ ವ್ಯಕ್ತಿಯೋರ್ವನಿಗೆ ಟೋಕಿಯೊ ನ್ಯಾಯಾಲಯ ಗುರುವಾರದಂದು ಮರಣ ದಂಡನೆ ವಿಧಿಸಿದೆ.

30ರ ಹರೆಯದ ಟಕಹಿರೊ ಶಿರೈಶಿ ತಾನು ಯುವ ಸಂತ್ರಸ್ತರನ್ನು ಕೊಲೆಗೈದು ಕಸಾಯಿ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈತನನ್ನು ಭೇಟಿಯಾಗಿ ಹತ್ಯೆಗೊಳಗಾದ ಒಂಬತ್ತು ಮಂದಿಯಲ್ಲಿ ಓರ್ವನ ಹೊರತು ಉಳಿದವರೆಲ್ಲಾ ಮಹಿಳೆಯರಾಗಿದ್ದಾರೆ.

- Advertisement -

15ರಿಂದ 26ರ ನಡುವಿನ ಆತನ ಸಂತ್ರಸ್ತರು ಸಾಮಾಜಿಕ ಜಾಲತಾಣಗಳಲ್ಲಿ ಆತ್ಮಹತ್ಯೆಯ ಆಲೋಚನೆಗಳನ್ನು ವ್ಯಕ್ತಪಡಿಸಿದ್ದರು ಮತ್ತು ಸಾವಿಗೆ ಒಪ್ಪಿಕೊಂಡಿದ್ದರು. ಹಾಗಾಗಿ ಆತನಿಗೆ ಮರಣದಂಡನೆ ವಿಧಿಸಬಾರದು. ಬದಲಾಗಿ ಜೈಲು ಶಿಕ್ಷೆಯನ್ನು ನೀಡಬೇಕು ಎಂದು ಆತನ ವಕೀಲರು ವಾದಿಸಿದ್ದರು. ಆದರೆ ಮಂಗಳವಾರದಂದು ನ್ಯಾಯಾಲಯವು ಶಿರೈಶಿಗೆ ಮರಣ ದಂಡನೆಯನ್ನು ವಿಧಿಸಿದೆ.

ಟ್ವಿಟ್ಟರ್ ನಲ್ಲಿ ತಮ್ಮ ಜೀವವನ್ನು ಕೊನೆಗೊಳಿಸುವ ಕುರಿತು ಪೋಸ್ಟ್ ಮಾಡಿದ ವ್ಯಕ್ತಿಗಳನ್ನು ಶಿರೈಶಿ ಸಂಪರ್ಕಿಸುತ್ತಿದ್ದ . ಅವರ ಯೋಜನೆಗೆ ತಾನು ನೆರವಾಗುವುದಾಗಿ ಅಥವಾ ಅವರೊಂದಿಗೆ ತಾನೂ ಸಾಯುವುದಾಗಿ ಆತ ಹೇಳುತ್ತಿದ್ದ.

- Advertisement -