ವಾಷಿಂಗ್ಟನ್: ಟ್ವಿಟರ್ ನಲ್ಲಿ ಉದ್ಯೋಗ ಕಡಿತ ಮುಂದುವರೆದಿದ್ದು, ಮತ್ತೆ 200 ಉದ್ಯೋಗಿಗಳನ್ನು ವಜಾ ಮಾಡಲಾಗಿದೆ.
ಅಕ್ಟೋಬರ್’ನಲ್ಲಿ ಎಲಾನ್ ಮಸ್ಕ್, ಟ್ವಿಟರ್ ಅನ್ನು ಖರೀದಿಸಿದ ಬಳಿಕ ವೆಚ್ಚ ತಗ್ಗಿಸುವ ಕಾರಣ ನೀಡಿ ಉದ್ಯೋಗ ಕಡಿತ ಆರಂಭಿಸಿದ್ದಾರೆ.
ಆಂತರಿಕ ಸಂದೇಶ ಸೇವೆ ಸ್ಲ್ಯಾಕ್ ಅನ್ನು ಸ್ಥಗಿತಗೊಳಿಸಿ, ಉದ್ಯೋಗಿಗಳು ಪರಸ್ಪರ ಸಂಪರ್ಕ ಸಾಧಿಸುವುದಕ್ಕೆ ತಡೆ ಹಾಕಿದ್ದ ಟ್ವಿಟರ್ ಆಡಳಿತ ಮಂಡಳಿ, ಅದಾದ ಒಂದು ವಾರದ ಬಳಿಕ 200 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ.