ಭಾರತದ ಕಾನೂನಿಗೆ ಬದ್ಧರಾಗಿ : ಟ್ವಿಟರ್ ಗೆ ಕೇಂದ್ರ ಸರಕಾರದ ಎಚ್ಚರಿಕೆ

Prasthutha|

ನವದೆಹಲಿ : ಪ್ರಧಾನಿ ಮೋದಿ ಸರಕಾರದ ನೂತನ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗಳಿಗೆ ಸಂಬಂಧಿಸಿ, ಪ್ರಚೋದನಕಾರಿ ಮತ್ತು ತಪ್ಪು ಮಾಹಿತಿ ಹಂಚುತ್ತಿರುವ ಟ್ವಿಟರ್ ಖಾತೆಗಳನ್ನು ರದ್ದುಗೊಳಿಸುವಂತೆ ತನ್ನ ಆದೇಶ ಪಾಲಿಸದಿರುವುದಕ್ಕೆ ಟ್ವಿಟರ್ ವಿರುದ್ಧ ಕೇಂದ್ರ ಸರಕಾರ ಅಸಮಾಧಾನ ವ್ಯಕ್ತಪಡಿಸಿದೆ.

- Advertisement -

ಟ್ವಿಟರ್ ತನ್ನದೇ ನಿಯಮಾವಳಿ ಮತ್ತು ಮಾರ್ಗಸೂಚಿಯನ್ನು ಹೊಂದಿದ್ದರೂ, ಭಾರತದಲ್ಲಿ ಕಾರ್ಯ ನಿರ್ವಹಿಸುವ ವಹಿವಾಟು ಸಂಸ್ಥೆ, ಕಡ್ಡಾಯವಾಗಿ ಭಾರತೀಯ ಕಾನೂನುಗಳನ್ನು ಗೌರವಿಸಬೇಕು ಮತ್ತು ಅನುಸರಿಸಬೇಕು ಎಂಬ ಸಂದೇಶ ರವಾನಿಸಿದೆ. ತುರ್ತು ಆದೇಶದಲ್ಲಿ ಹೆಸರಿಸಿದ ಖಾತೆಗಳನ್ನು ತಕ್ಷಣವೇ ನಿಷೇಧಿಸುವಂತೆ ಆದೇಶಿಸಿದೆ.

ಕಾನೂನುಬದ್ಧವಾಗಿ ನೀಡಿರುವ ಆದೇಶಗಳಿಗೆ ಸಂಸ್ಥೆ ಬದ್ಧವಾಗಬೇಕು. ತಕ್ಷಣವೇ ಈ ಆದೇಶಕ್ಕೆ ತಲೆಬಾಗಬೇಕು. ಕೆಲ ದಿನಗಳ ಬಳಿಕ ಇದನ್ನು ಜಾರಿಗೊಳಿಸಿದರೆ ಅದು ಅರ್ಥಹೀನವಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

- Advertisement -

ಸರಕಾರದ ಆದೇಶ ಭಾರತೀಯ ಕಾನೂನಿಗೆ ಅನುಸಾರವಾಗಿಲ್ಲ. ಹೀಗಾಗಿ ಖಾತೆಗಳನ್ನು ನಿಷೇಧಿಸುವ ಬದಲು ಸ್ವಲ್ಪಮಟ್ಟಿಗೆ ನಿರ್ಬಂಧಿಸುವುದಾಗಿ ಟ್ವಿಟರ್ ಸರಕಾರದ ಆದೇಶದ ಕುರಿತಾಗಿ ಹೇಳಿತ್ತು. ರೈತ ಹೋರಾಟದ ಕುರಿತು ಪೋಸ್ಟ್ ಗಳನ್ನು ಮಾಡುವ 1178 ಖಾತೆಗಳನ್ನು ನಿಷೇಧಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಟ್ವಿಟರ್ ಗೆ ಸೂಚಿಸಿತ್ತು.

Join Whatsapp