ವಾಷಿಂಗ್ಟನ್: ಟ್ವಿಟ್ಟರ್ ಬ್ಲೂ ಟಿಕ್ ಪಡೆಯಲು ಮಾಸಿಕ $8 ಶುಲ್ಕ ವಿಧಿಸಲಾಗುವುದು ಎಂದು ಟ್ವಿಟ್ಟರ್’ನ ನೂತನ ಮುಖ್ಯಸ್ಥ ಎಲಾನ್ ಮಸ್ಕ್ ತಿಳಿಸಿದ್ದಾರೆ.
ಟ್ವಿಟ್ಟರ್ ಬಳಕೆದಾರರಿಂದ ತೀವ್ರ ವಿರೋಧ ಬಂದುದರಿಂದ ಶುಲ್ಕವನ್ನು 20 ಅಮೆರಿಕದ ಡಾಲರ್‌ನಿಂದ (ರೂ. 1,600) 8 ಡಾಲರಿಗೆ (ರೂ. 650) ಇಳಿಸಲು ಒಪ್ಪಿದ್ದಾರೆ. ಬರೇ ಜಾಹಿರಾತುಗಳಿಂದ ಸಂಸ್ಥೆ ನಡೆಸಲಾಗದು ಎಂದು ಮಸ್ಕ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಟ್ವಿಟರ್’ನ ಪ್ರಸ್ತುತ ಬಳಕೆದಾರರು ಮತ್ತು ರೈತರ ವ್ಯವಸ್ಥೆ ಬ್ಲೂ ಟಿಕ್ ಅನ್ನು ಹೊಂದಿರುವ ಅಥವಾ ಹೊಂದಿಲ್ಲದವರು ಬುಲ್’ಶಿಟ್ ಆಗಿದೆ. ಸಾಮಾನ್ಯ ಜನರಿಗೆ ಈ ಅಧಿಕಾರ ಪಡೆಯಲು ಪ್ರತಿ ತಿಂಗಳು 8 ಡಾಲರ್ ಪಾವತಿಸಿ ಎಂದು ತಿಳಿಸಿದ್ದಾರೆ.
ಬೋರ್ಡ್ ಬರಕಾಸ್ತು ಮಾಡಿ ತನ್ನನ್ನೇ ಸಿಇಒ ಆಗಿ ನೇಮಕ ಮಾಡಿಕೊಂಡ ಮಸ್ಕ್ ಒಟ್ಟು 25% ಸಿಬ್ಬಂದಿ ಕಡಿತ ಮಾಡಲಾಗುವುದು ಎಂದಿದ್ದಾರೆ. ಮೇಲ್ಮಟ್ಟದ ಅಧಿಕಾರಿಗಳ ಸಂಬಳದಲ್ಲಿ 25% ಕಡಿತವನ್ನೂ ಅವರು ಘೋಷಿಸಿದ್ದಾರೆ.
ಬ್ಲೂ ಟಿಕ್ ಚಂದಾದಾರರು ತಕ್ಷಣ ಪ್ರತಿಕ್ರಿಯೆ, ಉಲ್ಲೇಖ ಮತ್ತು ಶೋಧಿಸಲು ಆದ್ಯತೆಯನ್ನು ಪಡೆಯುತ್ತಾರೆ ಮತ್ತು ದೀರ್ಘವಾದ ವೀಡಿಯೋಗಳು ಮತ್ತು ಆಡಿಯೋಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುತ್ತದೆ ಎಂದು ಮಸ್ಕ್ ತಿಳಿಸಿದರು.
ಈ ಮಧ್ಯೆ ಇತ್ತೀಚಿನ ಸಮೀಕ್ಷೆಯಲ್ಲಿ ಭಾಗವಹಿಸಿದ 80% ಕ್ಕಿಂತ ಹೆಚ್ಚು ಟ್ವಿಟರ್ ಬಳಕೆದಾರರು ಬ್ಲೂ ಟಿಕ್‌ಗೆ ಪಾವತಿಸುವುದಿಲ್ಲ ಎಂದು ಹೇಳಿದ್ದು, ಕೇವಲ 10% ಜನರು ತಿಂಗಳಿಗೆ $5 ಪಾವತಿಸಲು ಸಿದ್ಧರಿದ್ದಾರೆ ಎಂದು ತಿಳಿಸಿದ್ದಾರೆ.
ಟ್ವಿಟರ್ ವೇರಿಪೈ ಬಳಕೆದಾರರಿಗೆ ನೀಲಿ ಟಿಕ್’ಗಾಗಿ $20 ಮಾಸಿಕ ಶುಲ್ಕವನ್ನು ವಿಧಿಸಲು ಪ್ರಾರಂಭಿಸಬಹುದು ಎಂಬ ಊಹಾಪೋಹಗಳ ಮಧ್ಯೆ ಎಲಾನ್ ಮಸ್ಕ್ ಈ ವಿವಾದಕ್ಕೆ ಟ್ವೀಟ್ ಮೂಲಕ ತೆರೆ ಎಳೆದಿದ್ದಾರೆ.