ಅರ್ಚನಾ ಕೊಲೆಯಲ್ಲಿ ರೋಚಕ ಟ್ವಿಸ್ಟ್: ಪತಿ- ಮಗಳಿಂದಲೇ ಹತ್ಯೆ !

Prasthutha|

ಬೆಂಗಳೂರು: ನಡುರಸ್ತೆಯಲ್ಲಿ ಹತ್ಯೆಗೀಡಾದ ಬೆಳ್ಳಂದೂರು ನಿವಾಸಿ ಅರ್ಚನಾ ರೆಡ್ಡಿ ಕೊಲೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು, ಆಸ್ತಿ ಹಾಗೂ ಐಷಾರಾಮಿ ಜೀವನಕ್ಕಾಗಿ ತಾಯಿಯ ಎರಡನೇ ಪತಿ ಜತೆ ಸೇರಿಕೊಂಡು ಪುತ್ರಿಯೇ ಕೃತ್ಯಕ್ಕೆ ಸಂಚು ರೂಪಿಸಿರುವುದು ತಿಳಿದು ಬಂದಿದೆ.

- Advertisement -

ಈ ಸಂಬಂಧ ಅರ್ಚನಾ ರೆಡ್ಡಿ ಎರಡನೇ ಪತಿ ನವೀನ್‌ ಕುಮಾರ್‌ (33), ಆಕೆಯ ಪುತ್ರಿ ಯುವಿಕಾ (21), ನವೀನ್‌ ಸ್ನೇಹಿತ ಸಂತೋಷ್‌ (35), ಅನೂಪ್‌, ದೀಪು ಹಾಗೂ ಇತರೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳು, ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಎಲೆಕ್ಟ್ರಾನಿಕ್ ಸಿಟಿಯ ಹೊಸರೋಡ್ ಸಿಗ್ನಲ್ ಬಳಿ  ಇನ್ನೋವಾ ಕಾರಿನಲ್ಲಿ ಹೋಗುತ್ತಿದ್ದ ಅರ್ಚನಾ ರೆಡ್ಡಿಯನ್ನು ಡಿ. 27ರಂದು ರಾತ್ರಿ 10.30ರ ವೇಳೆ ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

Join Whatsapp