ಒಬ್ಬನನ್ನೇ ವಿವಾಹವಾದ ಅವಳಿ ಸಹೋದರಿಯರು; ವರನ ವಿರುದ್ಧ ಪ್ರಕರಣ ದಾಖಲು

Prasthutha|

ಮುಂಬೈ: ಅವಳಿ ಸಹೋದರಿಯರಿಬ್ಬರು ಒಬ್ಬನನ್ನೇ ವಿವಾಹವಾದ ಘಟನೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿದ್ದು, ವಿವಾಹದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -

ಅತುಲ್ ಎಂಬಾತ ಅವಳಿ ಸಹೋದರಿಯರಾದ ಐಟಿ ಉದ್ಯೋಗಿಗಳಾಗಿರುವ ರಿಂಕಿ-ಪಿಂಕಿ ಎಂಬ ಇಬ್ಬರು ಯುವತಿಯರನ್ನು ಮದುವೆ ಆಗಿದ್ದಾನೆ.

ಮಾಳಶಿರಸ್ ತಾಲೂಕಿನವನಾದ ಅತುಲ್ 36ರ ಹರೆಯದ ಅವಳಿಗಳನ್ನು ವರಿಸಿದ್ದಾನೆ. ತಂದೆ ತೀರಿಕೊಂಡ ಬಳಿಕ ರಿಂಕಿ-ಪಿಂಕಿ  ತಾಯಿ ಜೊತೆ ವಾಸವಿದ್ದರು. ಒಂದು ದಿನ ರಿಂಕಿ-ಪಿಂಕಿ ಅವರ ತಾಯಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅತುಲ್ ತನ್ನ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿಂದ ಈ ಅವಳಿ ಹೆಣ್ಮಕ್ಕಳ ಜೊತೆ ಸ್ನೇಹ ಬೆಳೆಬೆಳೆದಿತ್ತು. ಹೀಗೆ ಪರಿಚಯವಾದ ಸ್ನೇಹ ಇದೀಗ ವಿವಾಹಕ್ಕೆ ಕಾಲಿಟ್ಟಿದೆ.

- Advertisement -

ಈ ವಿವಾಹಕ್ಕೆ ಎರಡೂ ಕುಟುಂಬಗಳಿಂದ ಯಾವುದೇ ಆಕ್ಷೇಪ ಇಲ್ಲವಾದರೂ, ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ಅರಂಭಿಸಿದ್ದಾರೆ. ಅಕ್ಲುಜ್ ಪೊಲೀಸ್ ಠಾಣೆಯಲ್ಲಿ ವರನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 494 ಅಡಿಯಲ್ಲಿ ನಾನ್-ಕಾಗ್ನೈಸಬಲ್ ಪ್ರಕರಣವನ್ನು ದಾಖಲಿಸಿಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp