ಮಂಡ್ಯದಲ್ಲಿ ಕೇಸರಿ ವಿದ್ಯಾರ್ಥಿಗಳನ್ನೆದುರಿಸಿದ ಮುಸ್ಕಾನ್’ಗೆ ಧೈರ್ಯ ತುಂಬುವುದು TV9 ಚಾನೆಲಿಗೆ ಪ್ರಚೋದನೆಯಂತೆ !

Prasthutha|

►ಸಮಾಜಕ್ಕೆ ಧನಾತ್ಮಕ ಸಂದೇಶ ಸಾರಬೇಕಾದವರು ಹೀಗಾದರೆ ?

- Advertisement -

ಬೆಂಗಳೂರು : ಮಂಡ್ಯ ಪಿಇಎಸ್ ಕಾಲೇಜಿನಲ್ಲಿ ಕೇಸರಿ ಧರಿಸಿದ್ದ ವಿದ್ಯಾರ್ಥಿಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದ ವಿದ್ಯಾರ್ಥಿನಿ ಮುಸ್ಕಾನ್ ಗೆ ಕರೆ ಮಾಡಿ ಧೈರ್ಯ ತುಂಬಿದ್ದ ಚಾಮರಾಜಪೇಟೆ ಮಾಜಿ ಕಾರ್ಪೊರೇಟರ್ ಇಮ್ರಾನ್ ಪಾಶಾ ಅವರ ಕಾರ್ಯವನ್ನು ಕನ್ನಡ ಸುದ್ದಿ ವಾಹಿನಿ ಟಿವಿ9, ಅದನ್ನೊಂದು  ಪ್ರಚೋದನಾತ್ಮಕ ಕೆಲಸವೆಂಬಂತೆ ವರದಿ ಮಾಡಿದೆ.  ಈ ಕುರಿತು ನಿನ್ನೆ ವರದಿ ಮಾಡಿದ್ದ ಚಾನೆಲ್, ಆ ಬಳಿಕ ಸಂಜೆ ಮತ್ತೊಮ್ಮೆ ಆ ಕುರಿತು ವಿಶೇಷ ವರದಿಯನ್ನೂ ಮಾಡಿತ್ತು. ಗುಂಪು ದಾಳಿಯಿಂದ ತಪ್ಪಿಸಿಕೊಂಡು ಮಾನಸಿಕವಾಗಿ ಜರ್ಜರಿತರಾಗಿದ್ದ ಹೆಣ್ಣುಮಗಳೊಬ್ಬಳಿಗೆ ಧೈರ್ಯ ತುಂಬುವ ಕೆಲಸವನ್ನಷ್ಟೇ  ಇಮ್ರಾನ್ ಪಾಶಾ ಮಾಡಿದ್ದರು. ಆದರೆ ಟಿವಿ9 ಚಾನೆಲಿಗೆ ಅದೇನೋ ದೊಡ್ಡ ಅಪರಾಧವಾಗಿ ಕಂಡಿದ್ದು ಮಾತ್ರ ವಿಪರ್ಯಾಸವಾಗಿದೆ.

ರಾಜ್ಯದಲ್ಲಿ ಕೇಸರಿ ಧರಿಸಿರುವ ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಸೃಷ್ಟಿಸಿರುವ ವಿವಾದವು ಇದೀಗ ಕೋರ್ಟ್ ವಿಚಾರಣಾ ಹಂತದಲ್ಲಿದೆ. ಫೆಬ್ರವರಿ 8ರಂದು ಎ ಎಸ್ ದೀಕ್ಷಿತ್ ನೇತೃತ್ವದ ಏಕ ಸದಸ್ಯ  ಪೀಠ ವಿಚಾರಣೆ ಕೈಗೆತ್ತಿಕೊಳ್ಳುವ ದಿನದಂದು ಕೋರ್ಟ್ ಗೆ ಒತ್ತಡ ತರುವ ತಂತ್ರದ ಭಾಗವಾಗಿ ರಾಜ್ಯದಾದ್ಯಂತ ಕೋಲಾಹಲ ಸೃಷ್ಟಿಸಿದ್ದ ಕೇಸರಿ ಧರಿಸಿದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಕಲ್ಲೆಸೆದು ಹಾನಿಗೊಳಿಸಿದ್ದರು. ಇಡೀ ರಾಜ್ಯದಾದ್ಯಂತ ಆತಂಕದ ಮತ್ತು ಉದ್ವಿಗ್ನತೆಯ ವಾತಾವರಣ ಸೃಷ್ಟಿ ಮಾಡಿದ್ದರು.

- Advertisement -

ಈ ನಡುವೆ ಮಂಡ್ಯದಲ್ಲಿ ತನ್ನ ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿನಿಗೆ ಹೊರಗಿನ ವಿದ್ಯಾರ್ಥಿಗಳೂ ಸೇರಿದಂತೆ ಗುಂಪೊಂದು ದಾಳಿ ಮಾಡುವ ರೀತಿಯಲ್ಲಿ ಘೋಷಣೆಗಳನ್ನು ಕೂಗುತ್ತಾ ಮುಸ್ಕಾನ್ ಳ ಹಿಂದೆ ಬಂದಿತ್ತು. ಈ ವೇಳೆ ಅವರನ್ನು ಮುಸ್ಕಾನ್ ದಿಟ್ಟತನದಿಂದ ಎದುರಿಸಿ ಮರು ಘೋಷಣೆ ಹಾಕಿದ್ದಳು. ಮುಸ್ಕಾನ್ ಗೆ ಕರೆ ಮಾಡಿ ಸಂತೈಸಿ, ಕಾನೂನು ರೀತಿಯಲ್ಲೇ ಮುಂದುವರೆಯಿರಿ ಎಂಬ ಸಲಹೆಯ ಜೊತೆಗೆ ಆಕೆಯ ಧೈರ್ಯವನ್ನು ಮೆಚ್ಚಿಕೊಂಡಿದ್ದರು. ಇದನ್ನೇ ಮುಂದಿಟ್ಟುಕೊಂಡು ಟಿವಿ9 ಚಾನೆಲ್, ಇಮ್ರಾನ್ ಪಾಶಾರನ್ನು ಆರೋಪಿ ಸ್ಥಾನದಲ್ಲಿ ಕೂರಿಸಿ ವರದಿ ಮಾಡಿತ್ತು. ಸಮಾಜಕ್ಕೆ ಧನಾತ್ಮಕ ಸಂದೇಶ ಸಾರಬೇಕಾದ ಚಾನೆಲ್’ನ  ಈ ರೀತಿಯ ಕೃತ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.  



Join Whatsapp