ಟಿವಿ ಚರ್ಚೆಗಳು ವಾಯು ಮಾಲಿನ್ಯಕ್ಕಿಂತ ಅಪಾಯಕಾರಿ: ಸುಪ್ರೀಂ ಕೋರ್ಟ್

Prasthutha|

ಹೊಸದಿಲ್ಲಿ: ಟಿವಿ ಚರ್ಚೆಗಳು ಕ್ಷುಲ್ಲಕ ವಿಷಯಗಳನ್ನು ಬಳಸಿಕೊಂಡು ವಿವಾದ ಸೃಷ್ಟಿಸುತ್ತಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

- Advertisement -

“ನಿಮಗೆ ಸಮಸ್ಯೆ ಸೃಷ್ಟಿಸಬೇಕೆಂದಾದರೆ ನಮ್ಮ ಬಗ್ಗೆ ಚರ್ಚೆ ನಡೆಸಿ ದೂಷಿಸುತ್ತೀರಿ. ಟಿವಿ ಚರ್ಚೆಗಳು ವಾಯು ಮಾಲಿನ್ಯಕ್ಕಿಂತ ಅಪಾಯಕಾರಿಯಾಗಿದೆ” ಎಂದು ದೆಹಲಿಯಲ್ಲಿ ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ಅರ್ಜಿಯನ್ನು ಪರಿಗಣಿಸುತ್ತಿದ್ದ ಮುಖ್ಯ ನ್ಯಾಯಮೂರ್ತಿ ಹೇಳಿದರು.

ಮಾಲಿನ್ಯದ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ತೀವ್ರವಾಗಿ ಟೀಕಿಸಿದ ನ್ಯಾಯಾಲಯ, ಪಂಚತಾರಾ ಹೋಟೆಲ್ಗಳಲ್ಲಿ ಕುಳಿತುಕೊಂಡು ಕೆಲವರು ರೈತರನ್ನು ಟೀಕಿಸುತ್ತಿದ್ದಾರೆ ಎಂದು ಹೇಳಿದೆ. ದೆಹಲಿಯ ವಾಯು ಮಾಲಿನ್ಯಕ್ಕೆ ಸಂಬಂಧಿಸಿದಂತೆ ರೈತರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Join Whatsapp