ಟರ್ಕಿಯ ಸಂಸತ್ ಬಳಿ ಭಾರಿ ಸ್ಫೋಟ: ಇಬ್ಬರಿಗೆ ಗಾಯ

Prasthutha|

- Advertisement -

ಟರ್ಕಿಯ ರಾಜಧಾನಿ ಅಂಕಾರದ ಹೃದಯಭಾಗದಲ್ಲಿ ಭಾನುವಾರ ಭಾರೀ ಸ್ಫೋಟದ ಸದ್ದು ಕೇಳಿಸಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ.

ಕೆಲವು ವರದಿಗಳ ಪ್ರಕಾರ ಸ್ಫೋಟದ ನಂತರ ಗುಂಡಿನ ದಾಳಿ ನಡೆದಿದೆ. ಸಂಸತ್ತು ಮತ್ತು ಆಂತರಿಕ ವ್ಯವಹಾರಗಳ ಸಚಿವಾಲಯದ ಸಮೀಪವಿರುವ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ್ದು, ಕಾರಣ ತಿಳಿದುಬಂದಿಲ್ಲ.

- Advertisement -

ಯಾವುದೇ ಸಾವು-ನೋವುಗಳ ಬಗ್ಗೆ ತಕ್ಷಣದ ವರದಿಗಳಿಲ್ಲ. ಬೇಸಿಗೆ ರಜೆಯ ನಂತರ ಸಂಸತ್ತು ಭಾನುವಾರ ಮತ್ತೆ ತೆರೆಯಲು ನಿರ್ಧರಿಸಲಾಗಿದೆ.

Join Whatsapp