ಇಸ್ಲಾಮೋಫೋಬಿಯಾದ ವಿರುದ್ಧ ಜರ್ಮನ್ ಪ್ರಜೆಯಿಂದ ಯುರೋಪಿನಾದ್ಯಂತ ಸೈಕ್ಲಿಂಗ್ ಅಭಿಯಾನ

Prasthutha|

ಅಂಕಾರಾ: ಜನಾಂಗೀಯತೆ ಮತ್ತು ಇಸ್ಲಾಮೋಫೋಬಿಯಾ ವಿರುದ್ಧ ಜನರಿಗೆ ಅರಿವು ಮತ್ತು ಟರ್ಕಿಶ್ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಜರ್ಮನ್ ವ್ಯಕ್ತಿಯೊಬ್ಬರು ಯುರೋಪಿನಾದ್ಯಂತ ಸೈಕ್ಲಿಂಗ್ ಯಾತ್ರೆ ನಡೆಸಿದ್ದಾರೆ.

- Advertisement -

ರೀಕೆ ಕರಾಕ ಪಾಕ್ ಎಂಬ ಜರ್ಮನ್ ಪ್ರಜೆ ಕಳೆದ 15 ತಿಂಗಳಿಂದ ತುರ್ಕಿ ಧ್ವಜವಿರುವ ಸೈಕಲ್ ಮೂಲಕ ಯುರೋಪ್ ಸುತ್ತಿದ್ದಾರೆ. ಟರ್ಕಿ ಜನತೆ ಮತ್ತು ಮುಸ್ಲಿಮರ ವಿರುದ್ಧ ಯುರೋಪ್‌ನಲ್ಲಿ ಇರುವ ತಪ್ಪುಗ್ರಹಿಕೆಗಳನ್ನು ಹಾಗೂ ಜನಾಂಗೀಯ, ಇಸ್ಲಾಮೋಫೋಬಿಯಾಗಳನ್ನು ತೊಲಗಿಸುವುದು ಈ ಪ್ರವಾಸದ ಉದ್ದೇಶವಾಗಿದೆ. ಜರ್ಮನ್ ಮಾಧ್ಯಮಗಳು ಟರ್ಕಿಯ ನಾಗರಿಕರು ಮತ್ತು ಮುಸ್ಲಿಮರನ್ನು ಪಕ್ಷಪಾತದ ಮೂಲಕ ದಾರಿತಪ್ಪಿಸುವ ರೀತಿಯಲ್ಲಿ ಚಿತ್ರಿಸುತ್ತಿವೆ ಎಂದು ರೀಕೆ ತಿಳಿಸಿದ್ದಾರೆ.

10,000 ಕಿ.ಮೀ ಸೈಕಲ್ ತುಳಿದ 47 ವರ್ಷದ ರೀಕೆ ಇದೀಗ ಟರ್ಕಿ ತಲುಪಿದ್ದಾರೆ. ಜರ್ಮನಿಯ ಕಲೋನ್‌ ನಿಂದ ಆರಂಭಿಸಿದ ರೀಕೆ ಪ್ರಯಾಣ ಮ್ಯೂನಿಚ್, ಆಸ್ಟ್ರಿಯಾ, ಸ್ಲೋವಾಕಿಯಾ, ಹಂಗೇರಿ, ಸೆರ್ಬಿಯಾ ಮತ್ತು ಬಲ್ಗೇರಿಯಾ ನಂತರ ಟರ್ಕಿಗೆ ತಲುಪಿದೆ.

Join Whatsapp