ಹಯಾತ್: ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪನ ಸಂಭವಿಸಿದ ಸುಮಾರು 12 ದಿನಗಳ ನಂತರ, ರಕ್ಷಣಾ ಸಿಬ್ಬಂದಿ ಶುಕ್ರವಾರ ಒಬ್ಬ ವ್ಯಕ್ತಿಯನ್ನು ಅವಶೇಷಗಳಿಂದ ರಕ್ಷಿಸಿದ್ದಾರೆ.
ಸಿರಿಯಾ ಗಡಿಯ ಬಳಿಯ ಹಟೇ ಪ್ರಾಂತ್ಯದಲ್ಲಿ ಭೂಕಂಪನ ಸಂಭವಿಸಿದ 278 ಗಂಟೆಗಳ ನಂತರ ಹಕನ್ ಯಾಸಿನೊಗ್ಲು (45) ಎಂಬ ವ್ಯಕ್ತಿಯನ್ನು ರಕ್ಷಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಹತಾಯ್ ಪ್ರಾಂತ್ಯದ ಅಂಟಾಕ್ಲಾ ನಗರದ ಬಹುಮಹಡಿ ಕಟ್ಟಡದ ಅವಶೇಷಗಳಿಂದ 17 ಶವಗಳನ್ನು 11ನೇ ದಿನ ಹೊರ ತೆಗೆಯಲಾಗಿದೆ. ಅಲ್ಲೇ ಒಂದು ಕೋಣೆಯಲ್ಲಿದ್ದ ನಾಲ್ವರನ್ನು ರಕ್ಷಿಸಿ ಜೀವಂತವಾಗಿ ಹೊರ ತಂದಿದ್ದಾರೆ. ಅವರನ್ನು ಕೂಡಲೆ ಅಂಟಕ್ಲಾ ಆಸ್ಪತ್ರೆಗೆ ಸಾಗಿಸಲಾಯಿತು.
14ರ ಹರೆಯದ ಬಾಲಕ, 26ರ ಹರೆಯದ ಮಹಮ್ಮದ್ ಆಲಿ, 33ರ ಮುಸ್ತಫಾ ಅವ್ಸಿ ಹಾಗೂ ನೆಸ್ಲಿ ಎಂಬ ಮಹಿಳೆ ರಕ್ಷಿಸಲ್ಪಟ್ಟವರಾಗಿದ್ದಾರೆ.