ಒಲಿಂಪಿಕ್ಸ್ ಈಜುಕೊಳದಲ್ಲಿ ಅಹ್ಮದ್ ಅಭೂತಪೂರ್ವ ಗೆಲುವು

Prasthutha|

ಟೋಕಿಯೋ, ಜು.26: ಒಲಿಪಿಂಕ್ಸ್ ನ ಈಜುಕೊಳದಲ್ಲಿ ಅಮೆರಿಕ ಹಾಗೂ ಆಸ್ಟ್ರೇಯಾದ ಘಟಾನುಘಟಿಗಳಿಗೆ ಠಕ್ಕರ್ ಕೊಟ್ಟ ಟ್ಯುನಿಷಿಯಾದ ಚಿಗುರು ಮೀಸೆಯ ಹುಡುಗ ಅಹ್ಮದ್ ಹಫ್ನಾವುಯಿ 400 ಮೀಟರ್ಸ್ ಫ್ರೀ ಸ್ಟ್ರೈಲ್‌ನಲ್ಲಿ ಚಿನ್ನದ ಪದಕ ಜಯಿಸಿ ಬೆರಗು ಮೂಡಿಸಿದ್ದಾರೆ.

- Advertisement -


ಎಂಟು ಲ್ಯಾಪ್‌ ಗಳ ರೇಸ್‌ ನಲ್ಲಿ ತನಗಿಂತಲೂ ಹಿರಿಯ ಹಾಗೂ ಅನುಭವಿ 8 ಮಂದಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದ 18 ವರ್ಷದ ಅಹ್ಮದ್ ಚಿನ್ನದ ಪದಕಕ್ಕೆ ಮುತ್ತಿಟ್ಟರು.


ನಿಗದಿತ ಗುರಿಯನ್ನು 3 ನಿಮಿಷ 43.36 ಸೆಕೆಂಡುಗಳಲ್ಲಿ ಕ್ರಮಿಸಿದ ಅಹ್ಮದ್, 0/16 ಸೆಕೆಂಡ್‌ ಗಳ ಅಂತರದಲ್ಲಿ ಮೊದಲಿಗನಾದರೆ, ಆಸ್ಟ್ರೇಲಿಯಾದ ಜಾಕ್ ಮೆಕ್‌ ಲಾಹ್ಲಿನ್ 3 ನಿಮಿಷ 43. 52 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿಗೆ ತೃಪ್ತಿಪಟ್ಟರು. ಕಂಚಿನ ಪದಕ ಅಮೆರಿಕದ ಕೀರನ್ ಸ್ಮಿತ್ (3.43.94) ಪಾಲಾಯಿತು.
ಇದಕ್ಕೂ ಮೊದಲು ಟ್ಯುನಿಷಿಯಾದ ಅಹ್ಮದ್, ಅವಸ್ ಮೆಲೌಲಿ ಒಲಿಂಪಿಕ್ಸ್ ಈಜು ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದರು. 97 ವರ್ಷದ ಮೆಲೌಲಿ, 2008ರ ಬೀಜಿಂಗ್ ಒಲಿಂಪಿಕ್ಸ್ ನ 1,500 ಮೀಟರ್ಸ್ ಸ್ಪರ್ಧೆಯಲ್ಲಿ ಚಿನ್ನದ ಗುರಿ ತಲುಪಿದ್ದರು.

- Advertisement -


ನೀರಿಗೆ ಧುಮುಕಿದ ಕೂಡಲೇ ಪದಕದ ಬಗ್ಗೆಯೇ ಯೋಚಿಸುತ್ತಿದೆ. ಸಮಯದ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಪದಕವನ್ನು ಟ್ಯುನಿಷಿಯಾದ ಜನರಿಗೆ ಅರ್ಪಿಸುತ್ತೇನೆ. ವಿಜಯ ವೇದಿಕೆಯಲ್ಲಿ ರಾಷ್ಟ್ರಗೀತೆ ಮೊಳಗಿದ ವೇಳೆ ಖುಷಿಯಿಂದ ಕಣ್ಣುಗಳು ತೇವಗೊಂಡವು. ಈ ಸಾಧನೆ ಹೆಮ್ಮೆಯ ಭಾವ ಮೂಡಿಸಿದೆ ಎಂದು ಅಹ್ಮದ್ ಪ್ರತಿಕ್ರಿಯಿಸಿದ್ದಾರೆ.

ಭಾರತೀಯರಿಗೆ ನಿರಾಸೆ:
ಭಾರತದ ಈಜುಪಟುಗಳಾದ ಶ್ರೀಹರಿ ನಟರಾಜನ್ ಹಾಗೂ ಮಾನಾ ಪಟೇಲ್ ಸೆಮಿಫೈನಲ್ ಪ್ರವೇಶಿಸಲು ವಿಫಲರಾದರು. 40 ಈಜುಪಟುಗಳು ಪಾಲ್ಗೊಂಡಿದ್ದ 100 ಮೀಟರ್ಸ್ ಬ್ಯಾಕ್‌ ಸ್ಟ್ರೋಕ್‌ ನ ಹೀಟ್ಸ್ ನಲ್ಲಿ ಶ್ರೀಹರಿ ಆರನೇ ಸ್ಥಾನ (54.31 ಸೆ) ಪಡೆಯುವ ಮೂಲಕ ಒಟ್ಟಾರೆಯಾಗಿ 27ನೆ ಸ್ಥಾನದಲ್ಲಿ ಹಾಗೂ 1 ನಿಮಿಷ 05.20 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಮಾನಾ, 39ನೇಯವರಾಗಿ ಸ್ಪರ್ಧೆ ಕೊನೆಗೊಳಿಸಿದರು.

Join Whatsapp