ತುಮಕೂರು : ಇಲ್ಲಿ ಮನೆಯೊಂದರಲ್ಲಿ ಮಗುವಿನ ನಾಮಕರಣದ ಕಾರ್ಯಕ್ರಮಕ್ಕೆ ಹೆಜ್ಜೆನು ದಾಳಿಯಿಟ್ಟಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. 20 ಮಂದಿ ಗಾಯಗೊಂಡಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಲಕ್ಕೇನಹಳ್ಳಿ ಗೇಟ್ ಬಳಿ ಘಟನೆ ಸಂಭವಿಸಿದೆ. ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ನಾಮಕರಣ ಕಾರ್ಯಕ್ರಮ ನಡೆಯುತ್ತಿತ್ತು. ಅಲ್ಲಿಗೆ ಇದ್ದಕ್ಕಿದ್ದಂತೆ ಹೆಜ್ಜೆನು ದಾಳಿಯಿಟ್ಟಿದೆ. ವೀರಭದ್ರಯ್ಯ(47) ಮೃತಪಟ್ಟವರು. ಮೂವರು ಗಂಭೀರವಾಗಿ ದಾಳಿಗೊಳಗಾಗಿದ್ದಾರೆ ಎನ್ನಲಾಗಿದೆ. ತುಮಕೂರು ಜಿಲ್ಲೆಯ ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.