ತುಮಕೂರು: ಒಂದೇ ಗ್ರಾಮದ 4 ಮಕ್ಕಳು ನಾಪತ್ತೆ!

Prasthutha|

ಶಿರಾ: ಒಂದೇ ಗ್ರಾಮದ 4 ಮಕ್ಕಳು ನಾಪತ್ತೆಯಾಗಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕಬಾಣಗೆರೆ ಗ್ರಾಮದಲ್ಲಿ ನಡೆದಿದೆ.

- Advertisement -

ಮಂಜುಳಾ, ಮಧು ಕುಮಾರ್, ಮಹಾಲಕ್ಷ್ಮಿ ಹಾಗೂ ಭಾನು ನಾಪತ್ತೆಯಾದ ಮಕ್ಕಳಾಗಿದ್ದು, ಗ್ರಾಮದಲ್ಲೀಗ ಆತಂಕ ಆವರಿಸಿದೆ.

ಶನಿವಾರ ಮಧ್ಯಾಹ್ನ ಆಟ ಆಡಲೆಂದು ಮನೆಯಿಂದ ಹೋದವರು ವಾಪಸ್ ಮನೆಗೆ ಬಂದಿಲ್ಲ. ಎಷ್ಟೋತ್ತಾದರೂ ಮಕ್ಕಳು ಮನೆಗೆ ಬಂದಿಲ್ಲ ಎಂದು ಗಾಬರಿಗೊಂಡ ಪೋಷಕರು ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದ್ರೆ ಏನು ಪ್ರಯೋಜನವಾಗಿಲ್ಲ. ಊರೆಲ್ಲಾ ಹುಡುಕಿದರೂ ಮಕ್ಕಳು ಸಿಗದ ಕಾರಣ ಪೋಷಕರು ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

ನಾಪತ್ತೆಯಾಗಿರುವ ಎಲ್ಲರೂ 15-16 ವರ್ಷದ ವಯಸ್ಸಿನವರಾಗಿದ್ದಾರೆ. ಒಂದೇ ಗ್ರಾಮದ, ಒಂದೇ ವಯಸ್ಸಿನ ಅಂತರವಿರುವ 4 ಮಕ್ಕಳು ನಾಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ. ಸದ್ಯ ಘಟನೆ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಾಪತ್ತೆಯಾದವರಲ್ಲಿ ಮಂಜುಳಾ-ಮಧು ಕುಮಾರ್ ಅವಳಿ ಮಕ್ಕಳು. ಮಕ್ಕಳು ಬೆಂಗಳೂರು ಕಡೆ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಬೆಂಗಳೂರಿಗೆ ಯಾಕೆ ಹೋದರೂ ಯಾರು ಇವರನ್ನು ಕರೆಸಿಕೊಂಡರೆಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಶೋಧ ನಡೆಸುತ್ತಿದ್ದು,ಮಕ್ಕಳು ಸಿಕ್ಕ ಬಳಿಕವಷ್ಟೇ ಸತ್ಯ ಹೊರಬರಲಿದೆ.

Join Whatsapp