ರೈಲಿನಿಂದ ಹೊರದಬ್ಬಿದ ಟಿಟಿಇ: ಸೈನಿಕನ ಸ್ಥಿತಿ ಗಂಭೀರ

Prasthutha|

ಲಕ್ನೋ: ರಾಜಧಾನಿ ಎಕ್ಸ್’ಪ್ರೆಸ್ಸ್ ರೈಲಿನಿಂದ ಟಿಟಿಇ ಸೈನಿಕರೊಬ್ಬರನ್ನು ಹೊರಕ್ಕೆ ತಳ್ಳಿದ್ದರಿಂದ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಘಟನೆ ಬರೇಲಿ ರೈಲು ನಿಲ್ದಾಣದ ಬಳಿ ನಡೆದಿದೆ.

- Advertisement -

ರಜಪೂತ್ ರೈಫಲ್ಸ್’ಗೆ ಸೇರಿದ ಸೋನುಕುಮಾರ್ ಸಿಂಗ್ ಎಂಬ 29 ವರ್ಷ ವಯಸ್ಸಿನ ಸೈನಿಕ ಕರ್ತವ್ಯಕ್ಕಾಗಿ ದೆಹಲಿಗೆ ತೆರಳುವ ಸಲುವಾಗಿ ಬರೇಲಿಯಲ್ಲಿ ದಿಬ್ರೂಗಢ- ಹೊಸದಿಲ್ಲಿ ರಾಜಧಾನಿ ಎಕ್ಸ್’ಪ್ರೆಸ್ಸ್ ರೈಲು ಏರಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಸೈನಿಕ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದು, ಮಿಲಿಟರಿ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ. ಅವರ ಆರೋಗ್ಯಸ್ಥಿತಿ ಚಿಂತಾಜನಕವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ.

- Advertisement -

ರಾಜಧಾನಿ ಎಕ್ಸ್’ಪ್ರೆಸ್ಸ್ ರೈಲಿನ ಕುಪನ್ ಬೋರೆ ಎಂಬ ಟಿಟಿಇ 2ನೇ ಪ್ಲಾಟ್’ಪಾರಂನಲ್ಲಿ ರೈಲಿನಿಂದ ತಳ್ಳಿದ ಕಾರಣದಿಂದ ಕೆಳಕ್ಕೆ ಬಿದ್ದ ಸೈನಿಕ ತೀವ್ರವಾಗಿ ಗಾಯಗೊಂಡಿದ್ದಾರೆ. ಕೆಳಗೆ ಬಿದ್ದಾಗ ಅವರ ಒಂದು ಕಾಲು ರೈಲಿನ ಚಕ್ರದಡಿ ಸಿಲುಕಿ ಬೇರ್ಪಟ್ಟಿದ್ದು, ಇನ್ನೊಂದು ಕಾಲು ಜಜ್ಜಿ ಹೋಗಿದೆ. ಶಸ್ತ್ರಚಿಕಿತ್ಸೆ ನಡೆಸಿ ಇದನ್ನು ಕತ್ತರಿಸಬೇಕಾಗಿದೆ” ಎಂದು ಬರೇಲಿ ಜಿಆರ್’ಪಿ ಅಧಿಕಾರಿ ಅಜೀತ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.

ಸುಬೇದಾರ್ ಹರೀಂದರ್ ಕುಮಾರ್ ಸಿಂಗ್ ಎಂಬವರು ನೀಡಿದ ದೂರಿನ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 326 ಮತ್ತು 307 ರ ಅನ್ವಯ ಟಿಟಿಇ ವಿರುದ್ಧ ಎಫ್ಐಆರ್ ದಾಖಲಾಗಿದೆ.

Join Whatsapp