ಬೆಂಗಳೂರು: ರಾಹುಲ್ ಗಾಂಧಿ ಅವರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲಾಗದ ಬಿಜೆಪಿ, ತನಗೆ ಹೇಳಿದ ಮಾತನ್ನು ಹಿಂದೂ ಧರ್ಮಕ್ಕೆ ಹೇಳಿದ್ದಾರೆ ಎಂದು ತಿರುಚಿ ತನ್ನ ವೈಫಲ್ಯ ಮರೆಮಾಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಭಯಪಡಬೇಡಿ, ಭಯಗೊಳಿಸಬೇಡಿ’ ಎಂದು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಸೇರಿದಂತೆ ಎಲ್ಲ ಧರ್ಮಗಳು ಸಾರಿ ಹೇಳಿವೆ. ಆದರೆ ಬಿಜೆಪಿಯಲ್ಲಿ ಹಿಂದುಗಳೆಂದು ಹೇಳಿಕೊಳ್ಳುವವರ ಕೆಲಸವೇ ಹಿಂಸೆ, ಭಯ ಮತ್ತು ಸುಳ್ಳು ಹರಡುವುದು….” – ಹೀಗೆಂದು ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಹೇಳಿದರೆ ಬಿಜೆಪಿ ನಾಯಕರೇಕೆ ಉರಿದು ಬೀಳಬೇಕು?
ಮೋದಿ ಅವರಿಗೆ, ಆರ್.ಎಸ್.ಎಸ್ ನವರಿಗೆ, ಬಿಜೆಪಿಯವರಿಗೆ ಗುರಿಯಾಗಿಸಿ ಹೇಳಿದರೆ ಅದು ಇಡೀ ಹಿಂದೂ ಧರ್ಮಕ್ಕೆ ಹೇಳಿದಂತಾಗುತ್ತದೆಯೇ? ಇಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲಾಗದ ಬಿಜೆಪಿ, ತನಗೆ ಹೇಳಿದ ಮಾತನ್ನು ಹಿಂದೂ ಧರ್ಮಕ್ಕೆ ಹೇಳಿದ್ದಾರೆ ಎಂದು ತಿರುಚಿ ತನ್ನ ವೈಫಲ್ಯ ಮರೆಮಾಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ವಾಟ್ಸ್ ಆಪ್ ನಲ್ಲಿ ಬಿಜೆಪಿ ಕೃಪಾಪೋಷಿತ ಫೇಕ್ ನ್ಯೂಸ್ ಶೂರರು ಹರಿಬಿಟ್ಟಿರುವ ಅರ್ಧಂಬರ್ಧ ವಿಡಿಯೋ ನೋಡಿ ಅದನ್ನು ಇತರರಿಗೂ ಶೇರ್ ಮಾಡದಿರಿ. ಸತ್ಯ ಏನೆಂಬುದನ್ನು ಒಳಗೊಂಡ ಪೂರ್ತಿ ವಿಡಿಯೋ ಇಲ್ಲಿದೆ ಎಂದು ಸಿಎಂ ಸಿದ್ದರಾಮಯ್ಯ ಸಮರ್ಥನೆ ನೀಡಿದ್ದಾರೆ.
'ಭಯಪಡಬೇಡಿ, ಭಯಗೊಳಿಸಬೇಡಿ'
— Siddaramaiah (@siddaramaiah) July 1, 2024
ಎಂದು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಸೇರಿದಂತೆ ಎಲ್ಲ ಧರ್ಮಗಳು ಸಾರಿ ಹೇಳಿವೆ.
ಆದರೆ ಬಿಜೆಪಿಯಲ್ಲಿ ಹಿಂದುಗಳೆಂದು ಹೇಳಿಕೊಳ್ಳುವವರ ಕೆಲಸವೇ ಹಿಂಸೆ, ಭಯ ಮತ್ತು ಸುಳ್ಳು ಹರಡುವುದು…."
– ಹೀಗೆಂದು ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಹೇಳಿದರೆ ಬಿಜೆಪಿ ನಾಯಕರೇಕೆ ಉರಿದು ಬೀಳಬೇಕು?… pic.twitter.com/XXVAhI2BZN