ಬಝ್ಮೆ ನಿಸ್ವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ಕಾಲರ್ ಶಿಪ್ ಕಾರ್ಯಕ್ರಮ

Prasthutha|

ಕೆಲವೇ ಕೆಲವು ಮಹಿಳೆಯರಿಂದ 1971ರಲ್ಲಿ ಆರಂಭಗೊಂಡ ಬಝ್ಮೆ ನಿಸ್ವಾ ಟ್ರಸ್ಟ್ ಇಂದು 4146 ಬಡ ಮತ್ತು ಅಗತ್ಯವುಳ್ಳ ವಿದ್ಯಾರ್ಥಿನಿಯರಿಗಾಗಿ 1 ಕೋಟಿ 59 ಲಕ್ಷದ ಸ್ಕಾಲರ್ ಶಿಪ್ ವಿತರಿಸುತ್ತಿದೆ. ಸ್ಕಾಲರ್ ಶಿಪ್ ವಿತರಣಾ ಸಮಾರಂಭವು ದಿನಾಂಕ 27-11-2022ರಂದು ಹಳೆ ಏರ್ ಪೋರ್ಟ್ ರಸ್ತೆಯಲ್ಲಿರುವ ಡೈಮಂಡ್ ಡಿಸ್ಟ್ರಿಕ್ಟ್ ಕ್ಲಬ್ ಹೌಸ್ ನಲ್ಲಿ ಜರುಗಿತು.

- Advertisement -

ಪ್ರಮುಖವಾಗಿ ಹೆಣ್ಣು ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಈ ಟ್ರಸ್ಟ್ ಅಗತ್ಯವಿರುವವರಿಗೆ ವೈದ್ಯಕೀಯ ಸಹಾಯ, ವಿವಾಹ ಫಂಡ್, ವೃದ್ಧರಿಗೆ ಪಿಂಚಣಿ ಇತ್ಯಾದಿ ಸಮಾಜ ಸೇವಾ ಕಾರ್ಯಗಳನ್ನು ನಡೆಸುವ ಮೂಲಕ ಗಮನ ಸೆಳೆಯುತ್ತಿದೆ.

ಶ್ರೀಮತಿ ಹುಸ್ನಾ ಶರೀಫ್ ರವರ ಸಮರ್ಥ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಈ ಟ್ರಸ್ಟ್ ಮಹಿಳೆಯರಿಂದಲೇ ನಡೆಸಲ್ಪಡುತ್ತಿದೆ. ಹಾಗೂ ಮಹಿಳೆಯ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುತ್ತಿದೆ.

- Advertisement -