ಕೊನೆಗೂ ಅಮೆರಿಕ ಅಧ್ಯಕ್ಷರಾಗಿ ಬೈಡನ್ ಗೆಲುವು ಒಪ್ಪಲು ಮನಸು ಮಾಡಿದ ಟ್ರಂಪ್ | ಷರತ್ತು ಅನ್ವಯ!

Prasthutha|

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆಗೂ ಜೋ ಬೈಡನ್ ವಿರುದ್ಧದ ಸೋಲನ್ನು ಒಪ್ಪಿಕೊಳ್ಳಲು ಮನಸು ಮಾಡಿದಂತಿದೆ. ಚುನಾವಣೆಯಲ್ಲಿ ಬೈಡನ್ ಗೆದ್ದಿರುವುದು ಅಧಿಕೃತವಾಗಿ ಪ್ರಕಟವಾದರೆ, ತಾನು ಶ್ವೇತ ಭವನ ತೊರೆಯಲು ಸಿದ್ಧನಿರುವುದಾಗಿ ಟ್ರಂಪ್ ಹೇಳಿದ್ದಾರೆ. ಇದೇ ವೇಳೆ ಚುನಾವಣಾ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂಬ ಅವರ ವಾದದಿಂದ ಅವರು ಹಿಂದೆ ಸರಿದಿಲ್ಲ.

ನ.3ರ ಚುನಾವಣೆಯ ಬಳಿಕ ಇದೇ ಮೊದಲ ಬಾರಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈ ಉತ್ತರ ನೀಡಿದ್ದಾರೆ. ಚುನಾವಣೆಯಲ್ಲಿ ಬೈಡನ್ ಗೆಲುವು ಅಧಿಕೃತವಾದರೆ, ನೀವು ಶ್ವೇತಭವನ ತೊರೆಯುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, “ಖಂಡಿತಾ ತೊರೆಯುತ್ತೇನೆ, ಅದು ನಿಮಗೂ ಗೊತ್ತಿದೆ’’ ಎಂದು ಹೇಳಿದ್ದಾರೆ.

- Advertisement -