ವಾಷಿಂಗ್ಟನ್: ತಮ್ಮ ಬೆಂಬಲಿಗರನ್ನು ‘ಕಸ’ಕ್ಕೆ ಹೋಲಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಕಸದ ವಾಹನವನ್ನು ಚಲಾಯಿಸುವ ಮೂಲಕ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಭಾನುವಾರ ಟ್ರಂಪ್ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿದ್ದ ಹಾಲಿವುಡ್ ಹಾಸ್ಯನಟ ಟೋನಿ ಹಿಂಚ್ ಕ್ಲಿಫ್, ಪೋಟೊ ರಿಕೊವನ್ನು ‘ತೇಲುವ ಕಸದ ದ್ವೀಪ’ ಎಂದು ಕರೆದಿದ್ದರು. ಅಲ್ಲದೇ ತಮ್ಮ ಭಾಷಣದುದ್ದಕ್ಕೂ ಲ್ಯಾಟಿನ್ ಅಮೆರಿಕನ್ನರು, ಯಹೂದಿಗಳು, ಪ್ಯಾಲೆಸ್ಟೀನಿಯರನ್ನು ಅವಹೇಳನ ಮಾಡಿದ್ದರು.
ಜನಾಂಗೀಯ ನಿಂದನೆ ಮಾಡಿದ್ದ ಹಿಂಚ್ ಕ್ಲಿಫ್ ಹೇಳಿಕೆಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ್ದ ಬೈಡನ್, ‘ನಾನು ಕಂಡ ಏಕೈಕ ತೇಲುತ್ತಿರುವ ಕಸವೆಂದರೆ ಅದು ಟ್ರಂಪ್ ಬೆಂಬಲಿಗರು’ ಎಂದು ಹೇಳಿದ್ದರು.
ಬೈಡನ್ ಹೇಳಿಕೆ ಬೆನ್ನಲ್ಲೇ ಟ್ರಂಪ್ ಅವರು ಕಸದ ವಾಹನವನ್ನು ಚಲಾಯಿಸುತ್ತಿರುವ ವಿಡಿಯೊವನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಉದ್ಯಮಿ ಮತ್ತು ರಿಪಬ್ಲಿಕ್ ಪಕ್ಷದ ಬೆಂಬಲಿಗ ವಿವೇಕ್ ರಾಮಸ್ವಾಮಿ, ‘ನಾವು ಕಸವಲ್ಲ… ಕಸವನ್ನು ತೆಗೆದು ಹಾಕುವವರು’ ಎಂದು ಬರೆದುಕೊಂಡಿದ್ದಾರೆ.