ಬೈಡನ್ – ಕಮಲಾ ಇಂದು ಪದಗ್ರಹಣ | ಕೊನೆಗೂ ಡೊನಾಲ್ಡ್ ಟ್ರಂಪ್ ವಿದಾಯ ಭಾಷಣ

Prasthutha|

ವಾಷಿಂಗ್ಟನ್ ಡಿಸಿ : ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪದಗ್ರಹಣ ಇಂದು ನಡೆಯಲಿದೆ. ಈ ನಡುವೆ, ಕೊನೆಗೂ ಸೋಲೊಪ್ಪಿಕೊಂಡಿರುವ ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ವಿದಾಯ ಭಾಷಣದಲ್ಲಿ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದ್ದಾರೆ.

- Advertisement -

ಮೊದಲೇ ಚಿತ್ರೀಕರಿಸಿದ್ದ ಟ್ರಂಪ್ ಅವರ ವೀಡಿಯೊ ಸಂದೇಶವನ್ನು ಶ್ವೇತ ಭವನ ಬಿಡುಗಡೆ ಮಾಡಿದೆ. ಅಮೆರಿಕ ಅಧ್ಯಕ್ಷ ಪದವಿ ವಹಿಸಿರುವುದು ವಿವರಣೆಗೂ ಮೀರಿದ ಗೌರವ ಎಮದು ಟ್ರಂಪ್ ಅಭಿಪ್ರಾಯ ಪಟ್ಟಿದ್ದಾರೆ.

ಈ ವಾರ ನಾವು ಹೊಸ ಆಡಳಿತವನ್ನು ಉದ್ಘಾಟಿಸುತ್ತಿದ್ದು ಅಮೆರಿಕವನ್ನು ಸುರಕ್ಷಿತ ಹಾಗೂ ಸಮೃದ್ಧವಾಗಿರುವದಲ್ಲಿ ಅದರ ಯಶಸ್ಸಿಗಾಗಿ ಪ್ರಾರ್ಥಿಸುತ್ತೇವೆ. ಹೊಸ ಅಧ್ಯಕ್ಷರಿಗೆ ನಮ್ಮ ಶುಭಾಶಯಗಳನ್ನು ಅರ್ಪಿಸುತ್ತಿದ್ದೇವೆ. ಅದೃಷ್ಟ ಅವರ ಪಾಲಿಗಿರಲೆಂದು ಬಯಸುತ್ತೇವೆ ಎಂದು ಟ್ರಂಪ್ ತನ್ನ ಸಂದೇಶದಲ್ಲಿ ಹೇಳಿದ್ದಾರೆ.

- Advertisement -

ಚುನಾವಣಾ ಫಲಿತಾಂಶದಲ್ಲಿ ಅಕ್ರಮ ಎಸಗಲಾಗಿದೆ ಎಂದು ಪ್ರತಿಪಾದಿಸಿದ್ದ ಟ್ರಂಪ್ ಬೈಡನ್ ಗೆ ಅಧಿಕಾರ ಕೊಡುವಲ್ಲಿ ತುಂಬಾ ಸತಾಯಿಸಿದ್ದರು. ಟ್ರಂಪ್ ಅವರ ಬೆಂಬಲಿಗರು ಸಂಸತ್ ಭವನದ ಮೇಲೆ ದಾಳಿ ಮಾಡುವ ಮೂಲಕ ಆತಂಕದ ವಾತಾವರಣ ಸೃಷ್ಟಿಸಿದ್ದರು.

Join Whatsapp