ಮಡಿಕೇರಿ | ಎಣ್ಣೆ ಮತ್ತಲ್ಲಿ ಲಾರಿ ಡ್ರೈವರ್: ನಡು ರಸ್ತೆಯಲ್ಲಿ ನಿಂತ ಲಾರಿ

Prasthutha|

ಮಡಿಕೇರಿ: ಕಂಠ ಪೂರ್ತಿ ಕುಡಿದು ಚಾಲಕ ರಸ್ತೆ ಮಧ್ಯದಲ್ಲಿ ಲಾರಿಯನ್ನು ನಿಲ್ಲಿಸಿ ನಿದ್ದೆಗೆ ಜಾರಿದ ಘಟನೆ ಮಡಿಕೇರಿ – ಕುಶಾಲನಗರ ಹೆದ್ದಾರಿಯಲ್ಲಿ ನಡೆದಿದೆ.

- Advertisement -

ಮಂಗಳೂರಿನಿಂದ ಕುಶಾಲನಗರಕ್ಕೆ ಟೈಲ್ಸ್ ಸಾಗಿಸುತ್ತಿದ್ದ  ಲಾರಿಯ ಚಾಲಕ  ಮದ್ಯ ಸೇವಿಸಿದ್ದಾನೆ. ಫುಲ್ ಟೈಟ್ ಆಗಿದ್ದರಿಂದ ಲಾರಿ ಚಲಾಯಿಸಲಾಗದೆ ಮಂಪರಿನಲ್ಲಿ ತೇಲುತ್ತಿದ್ದ. ಹೀಗಾಗಿ ರಸ್ತೆ ಮಧ್ಯದಲ್ಲಿಯೇ ಲಾರಿಯನ್ನು ನಿಲ್ಲಿಸಿ ನಿದ್ದೆ ಮಾಡಲಾರಾಂಭಿಸಿದ. ನಡು ರಸ್ತೆಯಲ್ಲಿ ನಿಂತ ಲಾರಿಯನ್ನು ಕಂಡವರು ಹೋಗಿ ನೋಡಿದಾಗ ವಿಷಯ ಬಯಲಾಗಿದೆ. ಚಾಲಕನೊಂದಿಗೆ ಕ್ಲೀನರ್ ಕೂಡ ಗುಂಡಿನ ಮತ್ತಿನಲ್ಲಿದ್ದ ಎಂದು ಹೇಳಲಾಗಿದೆ. ನಂತರ ಲಾರಿಯನ್ನು  ರಸ್ತೆ ಬದಿಗೆ ತಂದು ನಿಲ್ಲಿಸಲಾಯಿತು. ರಸ್ತೆ ಮಧ್ಯದಲ್ಲಿ ಲಾರಿಯನ್ನು ನಿಲ್ಲಿಸದೆ ಮುಂದಕ್ಕೆ ಚಲಾಯಿಸಿದ್ದಿದ್ದರೆ ಭಾರೀ ಅನಾಹುತ ಸಂಭಾವಿಸಲಿತ್ತು ಎಂಬುವುದು ಸ್ಥಳದಲ್ಲಿದ್ದವರ ಹೇಳುತ್ತಿದ್ದಾರೆ.

Join Whatsapp