ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಲಾರಿ: ಟ್ರಾಫಿಕ್ ಜಾಮ್

Prasthutha|

ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯಲ್ಲಿ 16 ಚಕ್ರದ ಲಾರಿ ಕೆಟ್ಟು ನಿಂತ ಪರಿಣಾಮ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.

- Advertisement -

ಹುಬ್ಬಳ್ಳಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಸಿಮೆಂಟ್ ಲಾರಿ ಬೆಳಗ್ಗೆ 8:30ರ ವೇಳೆಗೆ ಚಾರ್ಮಾಡಿ ಘಾಟಿಯ 10ನೇ ತಿರುವಿನಲ್ಲಿ ಕೆಟ್ಟು ನಿಂತಿದೆ. ಘಾಟಿಯ ತಿರುವಿನಲ್ಲಿ ಟರ್ನ್ ಮಾಡಲಾಗದೇ ಲಾರಿ ನಿಂತ ಕಾರಣ ಮುಂದೆಯೂ ಹೋಗಲಾಗದೆ, ಹಿಂದೆಯೂ ಹೋಗಲಾಗದೆ ವಾಹನಗಳ ಚಾಲಕರು ಈಗ ಪರದಾಡುತ್ತಿದ್ದಾರೆ.

ಚಿಕ್ಕಮಗಳೂರು-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿನಲ್ಲಿ 10 ಚಕ್ರದ ವಾಹನಕ್ಕಿಂತ ದೊಡ್ಡ ವಾಹನಗಳು ಸಂಚಾರಕ್ಕೆ ನಿಷೇಧವಿದೆ. ಪೊಲೀಸರು ವಾಹನ ಬಿಟ್ಟಿರುವುದಕ್ಕೆ ಸ್ಥಳೀಯರು ಅಸಮಾಧಾನಗೊಂಡಿದ್ದು ಬೆಳಗ್ಗೆಯಿಂದಲೂ ನೂರಾರು ವಾಹನ ಸವಾರರು ಪರದಾಡುತ್ತಿದ್ದಾರೆ.

Join Whatsapp