ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್​‌ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು; ಮತ ಎಣಿಕೆ ಆರಂಭ

Prasthutha|

ಹೊಸದಿಲ್ಲಿ: ತ್ರಿಪುರಾ, ನಾಗಾಲ್ಯಾಂಡ್‌ ಹಾಗೂ ಮೇಘಾಲಯ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಮತ ಎಣಿಕೆ ಈಗಾಗಲೇ ಆರಂಭವಾಗಿದೆ.

- Advertisement -

ಮತ ಎಣಿಕೆ ಪ್ರಕ್ರಿಯೆ ಇಂದು( ಮಾರ್ಚ್2) ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ.

ಸಂಜೆ ವೇಳೆಗೆ ಮೂರೂ ರಾಜ್ಯಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದ್ದು, ಫಲಿತಾಂಶದ ಅಪ್​ಡೇಟ್​​ಗಳು ಚುನಾವಣಾ ಆಯೋಗದ ವೆಬ್​ಸೈಟ್​ನಲ್ಲಿ ದೊರೆಯಲಿದೆ.

- Advertisement -

ಈಶಾನ್ಯ ರಾಜ್ಯಗಳ ಒಟ್ಟು 180 ಸ್ಥಾನಗಳಿಗೆ ಫೆಬ್ರವರಿ 16 ಮತ್ತು 28ರಂದು ಮತದಾನ ನಡೆದಿತ್ತು. ತ್ರಿಪುರಾದ 60 ಸ್ಥಾನಗಳ ವಿಧಾನಸಭೆಯಲ್ಲಿ ಬಹುಮತಕ್ಕೆ 31 ಸೀಟು ಬೇಕು. ಇನ್ನು ಮೇಘಾಲಯ ಹಾಗೂ ನಾಗಾಲ್ಯಾಂಡ್​​​ನ ತಲಾ 59 ವಿಧಾನಸಭಾ ಸ್ಥಾನಗಳಲ್ಲಿ ಬಹುಮತಕ್ಕೆ 30 ಸೀಟು ಗಳಿಸಲೇ ಬೇಕು.

ಪ್ರಸ್ತುತ ನಾಗಾಲ್ಯಾಂಡ್‌ನಲ್ಲಿ ಎನ್‌ಡಿಪಿಪಿ ಮತ್ತು ಬಿಜೆಪಿ ಮೈತ್ರಿ ಸರ್ಕಾರಿ ಅಸ್ತಿತ್ವದಲ್ಲಿದ್ದು, ಎನ್‌ಡಿಪಿಪಿಯ ನೀಫಿಯು ರಿಯೊ ಮುಖ್ಯಮಂತ್ರಿಯಾಗಿದ್ದಾರೆ.

ತ್ರಿಪುರಾದಲ್ಲಿ ಬಿಜೆಪಿ ಮತ್ತು ಐಪಿಎಫ್‌ಟಿ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದು, ಮಾಣಿಕ್‌ ಶಾ ಮುಖ್ಯಮಂತ್ರಿಯಾಗಿದ್ದಾರೆ. ಎನ್‌ಪಿಪಿ ಮುಖ್ಯಸ್ಥ ಕಾನ್ರಾಡ್ ಕೆ. ಸಂಗ್ಮಾ ಹಲವು ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡು ಮೇಘಾಲಯದಲ್ಲಿ ಸರ್ಕಾರ ಮುನ್ನಡೆಸುತ್ತಿದ್ದಾರೆ.

Join Whatsapp