ತ್ರಿಪುರಾ ಹಿಂಸಾಚಾರ| ಸರ್ಕಾರದಿಂದ ವರದಿ ಕೇಳಿದ ಹೈಕೋರ್ಟ್

Prasthutha|

ಗುವಾಹಟಿ: ತ್ರಿಪುರಾದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಮರ ಮೇಲೆ ನಡೆದಿರುವ ದೌರ್ಜನ್ಯಗಳ ಕುರಿತು ವಿವರವಾದ ವರದಿಯನ್ನು ನವೆಂಬರ್ 10 ರೊಳಗೆ ಸಲ್ಲಿಸುವಂತೆ ತ್ರಿಪುರಾ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

- Advertisement -

VHPಯ ಹೂಂಕಾರ್ ರ್ಯಾಲಿಯ ಸಂದರ್ಭದಲ್ಲಿ ಮುಸ್ಲಿಮರ ವಿರುದ್ಧ ವ್ಯಾಪಕ ಹಿಂಸಾಚಾರ ಮತ್ತು ಆಸ್ತಿ ನಾಶದ ವರದಿಗಳನ್ನು ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದ ಬಗ್ಗೆ ಕೈಗೊಂಡಿರುವ ಕ್ರಮದ ಬಗ್ಗೆಯೂ ಸ್ಪಷ್ಟನೆ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದೆ.

“ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು, ಕಪೋಲಕಲ್ಪಿತ ಸುದ್ದಿಗಳು, ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಾಧ್ಯಮಗಳಿಗೆ ಸತ್ಯವನ್ನು ಪ್ರಕಟಿಸುವ ಎಲ್ಲ ಹಕ್ಕಿದೆ. ಆದರೆ, ಅಸತ್ಯ ಮತ್ತು ಕೋಮು ಭಾವನೆ ಹರಡಲು ಅವಕಾಶ ನೀಡಬಾರದು” ಎಂದು ಹೈಕೋರ್ಟ್ ತಿಳಿಸಿದೆ.

Join Whatsapp