ಬಿಜೆಪಿಯ ತನ್ನದೇ ಪಕ್ಷದ ಶಾಸಕನನ್ನು ಜೈಲಿಗೆ ಕಳುಹಿಸಬೇಕೆಂದ ತ್ರಿಪುರಾ ಸಿಎಂ ಬಿಪ್ಲಬ್ ದೇಬ್

Prasthutha|

- Advertisement -

ಅಗರ್ತಲ: ತ್ರಿಪುರಾದ ಆಡಳಿತಾರೂಢ ಬಿಜೆಪಿಯೊಳಗಿನ ಬಣ ವೈಷಮ್ಯವು ತಿರುವು ಪಡೆದುಕೊಂಡಿದ್ದು, ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಶನಿವಾರ ಪಕ್ಷದ ಶಾಸಕ ಆಶಿಸ್ ಕುಮಾರ್ ಸಹಾ ಅವರನ್ನು ‘ಭೂ ಮಾಫಿಯಾ’ ಎಂದು ಕರೆದಿದ್ದು, ಅವರನ್ನು ಜೈಲಿಗೆ ಕಳುಹಿಸಬೇಕು ಎಂದು ಹೇಳಿದ್ದಾರೆ.

ಯಾರಾದರೂ ರಾಜಕೀಯವನ್ನು ಗುರಾಣಿಯಾಗಿ ಬಳಸಿಕೊಂಡು ಭೂ ಒತ್ತುವರಿಯಂತಹ ಕಾನೂನುಬಾಹಿರ ಕೃತ್ಯಗಳನ್ನು ನಡೆಸಿದರೆ, ಕಾನೂನು ಕ್ರಮದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆ ಮತ್ತು ಯಾರನ್ನೂ ಬಿಡುವುದಿಲ್ಲ” ಎಂದು ಮುಖ್ಯಮಂತ್ರಿ ಬಿಪ್ಲಬ್‌ ದೇಬ್ ಹೇಳಿದ್ದಾರೆ.

- Advertisement -

ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆಶಿಸ್‌ ಕುಮಾರ್‌ ಸಹಾ, “ಈ ಆರೋಪದ ಕುರಿತು ತನಿಖೆ ನಡೆಸಿ ಸಾಧ್ಯವಾದರೆ ಕ್ರಮ ಕೈಗೊಳ್ಳಲಿ” ಎಂದು ಸವಾಲು ಹಾಕಿದ್ದಾರೆ. ಮುಖ್ಯಮಂತ್ರಿ ಹೇಳಿಕೆಗೆ ಒಂದು ದಿನ ಮೊದಲು, ಕಳೆದ 30 ವರ್ಷಗಳಿಂದ ಶಾಸಕ ಆಶಿಸ್‌ ಸಹಾ ಅವರ ವಶದಲ್ಲಿದ್ದ ಉಜ್ಜಯಂತ ಅರಮನೆ ಮುಂಭಾಗದ ಕಟ್ಟಡದ ಒಂದು ಭಾಗವನ್ನು ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್‌ (ಎಎಂಸಿ) ಕೆಡವಿತ್ತು.



Join Whatsapp