ವಿಪಕ್ಷಗಳು ಗೋಮೂತ್ರದಿಂದ ಬಾಯಿ ಶುದ್ಧೀಕರಣ ಮಾಡಿಕೊಳ್ಳಲಿ ಎಂದ ತ್ರಿಪುರ ಬಿಜೆಪಿ ಸಚಿವ

Prasthutha|

ಹೊಸದಿಲ್ಲಿ: ‘ವಿಪಕ್ಷಗಳು ಗೋಮೂತ್ರದಿಂದ  ಬಾಯಿ ಶುದ್ಧೀಕರಣ ಮಾಡಿಕೊಳ್ಳಲಿ’ ಎಂದು ತ್ರಿಪುರಾದ ಬಿಜೆಪಿ ಸಚಿವ ಹೇಳಿಕೆ ನೀಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.

- Advertisement -

‘ವಿರೋಧ ಪಕ್ಷ‌ಗಳು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವುದಕ್ಕೂ ಮುನ್ನ ಗೋಮೂತ್ರದಿಂದ ಬಾಯಿ ಶುದ್ಧೀಕರಣ ಮಾಡಬೇಕು. ಕಳೆದ ಅವರ ಆಡಳಿತದ ಅವಧಿಯಲ್ಲಿ ತ್ರಿಪುರಾದಲ್ಲಿ ಹಿಂಸೆ ಮತ್ತು ಅರಾಜಕತೆ ಬಿಟ್ಟು ಬೇರೇನೂ ಇರಲಿಲ್ಲ’  ಎಂದು ಸಚಿವ ರತನ್‌ ಲಾಲ್‌ ನಾಥ್‌ ಹೇಳಿದ್ದಾರೆ.

‘ಬಿಜೆ‍‍ಪಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಹಾಳುಗೆಡವಲು ಹೊರಟಿದೆ. ಬಿಜೆಪಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಹೀಗಾಗಿ ಬಿಜೆಪಿ ವಿರೋಧಿ ಪಕ್ಷಗಳು ಒಟ್ಟಾಗಬೇಕು’ ಎಂದು ಕಾಂಗ್ರೆಸ್‌ ಕಾರ್ಯದರ್ಶಿ ಅಜಯ್‌ ಮಾಕನ್‌ ಅವರು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರತನ್ ಲಾಲ್, ವಿಪಕ್ಷಗಳು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವುದಕ್ಕೂ ಮುನ್ನ ಗೋಮೂತ್ರದಿಂದ ಬಾಯಿ ಶುದ್ಧೀಕರಣ ಮಾಡಿಕೊಳ್ಳಲಿ ಎಂದಿದ್ದಾರೆ.

- Advertisement -

ಸಚಿವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಪಿಎಂ ಕಾರ್ಯದರ್ಶಿ ಜಿತೇಂದ್ರ ಚೌದರಿ, ‘ಗೋಮೂತ್ರ ಕುಡಿಯುವ ಚಾಳಿ ಇರುವವರು ಗಣತಂತ್ರದ ಬಗ್ಗೆ ಕೇಳುವಾಗ ಸಿಟ್ಟಿಗೇಳುತ್ತಾರೆ’ ಎಂದು ಹೇಳಿದ್ದಾರೆ.



Join Whatsapp