ಪೆಟ್ರೋಲ್ ಗೆ 200 ರುಪಾಯಿ ಆದರೆ ತ್ರಿಪಲ್ ರೈಡ್ ಗೆ ಅವಕಾಶ: ಅಸಂಬದ್ಧ ಹೇಳಿಕೆ ನೀಡಿದ ಅಸ್ಸಾಂ ಬಿಜೆಪಿ ಅಧ್ಯಕ್ಷ

Prasthutha|

ಗುವಾಹಟಿ: ಅಸ್ಸಾಂ ನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 200 ರುಪಾಯಿ ಆದರೆ ದ್ವಿಚಕ್ರ ವಾಹನದಲ್ಲಿ ತ್ರಿಪಲ್ ರೈಡ್ಸ್ ಗೆ ಅವಕಾಶ ನೀಡಲಾಗುವುದೆಂದು ಅಸ್ಸಾಂ ಬಿಜೆಪಿ ಅಧ್ಯಕ್ಷ ಭಾಬೇಶ್ ಕಲಿಕಾ ಇಂದು ಅಸಂಬದ್ಧ ಹೇಳಿಕೆ ನೀಡಿದ್ದಾರೆ.

- Advertisement -

ಪೆಟ್ರೋಲ್ ಗೆ 200 ರುಪಾಯಿ ಆದ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಮೂವರು ಸವಾರಿಗೆ ಅವಕಾಶ ನೀಡಲಾಗುವುದು. ಈ ಸಂದರ್ಭದಲ್ಲಿ ಸರ್ಕಾರದ ಅನುಮತಿ ಕಡ್ಡಾಯ ಎಂದು ಅವರು ಮಾಧ್ಯಮಕ್ಕೆ ತಿಳಿಸಿದರು.

ಅಸ್ಸಾಂ ನ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪೆಟ್ರೋಲ್ ದರ ಪ್ರತಿ ಲೀಟರ್ ಗೆ 200 ರುಪಾಯಿ ಆದರೆ ದ್ವಿಚಕ್ರ ವಾಹನದಲ್ಲಿ ತ್ರಿಪಲ್ ರೈಡ್ಸ್ ಗೆ ಅವಕಾಶ ನೀಡಲಾಗುವುದೆಂದು ಹೇಳಿದ್ದಾರೆ.

- Advertisement -

ಮಾಜಿ ಸಚಿವರಾಗಿದ್ದ ಭಾಬೇಶ್ ಕಲಿಕಾ ಅವರು ಪ್ರಸಕ್ತ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದಾರೆ.

Join Whatsapp