ಜಮ್ಮು ಕಾಶ್ಮೀರದಲ್ಲಿ ಎರಡು ಬಾರಿ ಕಂಪಿಸಿದ ಭೂಮಿ

Prasthutha|

ಬಾರಾಮುಲ್ಲಾ: ಜಮ್ಮು ಕಾಶ್ಮೀರದಲ್ಲಿ ಇಂದು ಎರಡು ಬಾರಿ ಭೂಮಿ ಕಂಪಿಸಿದೆ.

- Advertisement -

4.9 ಹಾಗೂ 4.8 ತೀವ್ರತೆಯ ಭೂಕಂಪ ಸಂಭವಿಸಿದೆ. ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಮಂಗಳವಾರ ಬೆಳಗ್ಗೆ ಭೂಕಂಪನದ ಅನುಭವವಾಗಿದೆ. ಇದರ ಆಳವು 5 ಕಿ.ಮೀ ಎಂದು ಹೇಳಲಾಗುತ್ತಿದೆ.
ಪ್ರಬಲ ಭೂಕಂಪದಿಂದಾಗಿ ಜನರಲ್ಲಿ ಭೀತಿ ಉಂಟಾಗಿದೆ, ಜನರು ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರಗೆ ಓಡಿ ಬಂದರು. ಮುಂಜಾನೆ ಸಂಭವಿಸಿದ ಈ ಭೂಕಂಪದಿಂದಾಗಿ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಜುಲೈ 12 ರಂದು ಕೂಡ ಭೂಕಂಪ ಸಂಭವಿಸಿತ್ತು.

ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಬೆಳಿಗ್ಗೆ 6.45 ರ ಸುಮಾರಿಗೆ ಈ ಪ್ರದೇಶದಲ್ಲಿ ಭೂಕಂಪನದ ಅನುಭವವಾಯಿತು. ಭೂಕಂಪದ ಕೇಂದ್ರಬಿಂದು 5 ಕಿಲೋಮೀಟರ್ ಆಳದಲ್ಲಿದೆ. ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಕಾರ್ಗಿಲ್ ಮತ್ತು ಲಡಾಖ್‌ನಲ್ಲಿ ಪ್ರಬಲ ಭೂಕಂಪನವು ಸಂಭವಿಸಿತ್ತು



Join Whatsapp