ಉತ್ತರಪ್ರದೇಶದಲ್ಲಿ ನಡುಗಿದ ಭೂಮಿ: ಮನೆ ಬಿಟ್ಟು ಓಡಿ ಬಂದ ಜನರು

Prasthutha|

ಲಖನೌ: ರಾಜಧಾನಿ ಲಖನೌ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ನವೆಂಬರ್ 3ರ ರಾತ್ರಿ 11:32 ರ ಸುಮಾರಿಗೆ ರಾಜಧಾನಿ ಲಖನೌ ಸೇರಿದಂತೆ 50 ಜಿಲ್ಲೆಗಳಲ್ಲಿ ಮತ್ತೊಮ್ಮೆ ಭೂಕಂಪನದ ಅನುಭವವಾಗಿದೆ. ಈ ಭೂಕಂಪದ ಕೇಂದ್ರಬಿಂದು ನೇಪಾಳದಲ್ಲಿದ್ದು, ಭೂಮಿಯ 10 ಕಿಲೋಮೀಟರ್ ಆಳದಲ್ಲಿ ಕಂಡು ಬಂದಿದೆ.

- Advertisement -


ಭೂಕಂಪನದಿಂದಾಗಿ ರಾಜಧಾನಿ ಲಖನೌ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಜನರಲ್ಲಿ ಸಾಕಷ್ಟು ಭೀತಿ ಉಂಟಾಗಿದೆ. ಕಂಪನದ ಅನುಭವವಾದ ನಂತರ ನಾಗರಿಕರು ಮನೆಯಿಂದ ಹೊರ ಓಡಿಬಂದಿದ್ದಾರೆ. ಕಠ್ಮಂಡುವಿನಲ್ಲಿ ಸಂಭವಿಸಿದ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 6.4 ಎಂದು ಅಳೆಯಲಾಗಿದೆ. ಲಖನೌ, ಲಖಿಂಪುರ, ಸೀತಾಪುರ, ಬರೇಲಿ, ಮೀರತ್, ಹರ್ದೋಯಿ, ಗೋರಖ್ ಪುರ, ಜೌನ್ ಪುರ ಸೇರಿದಂತೆ 50ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭೂಕಂಪನದ ಅನುಭವವಾಗಿದೆ.



Join Whatsapp